ಮೈಸೂರು: ಮೈಸೂರಿನ ಬಹುಕೋಟಿ ಗೋಲ್ಡ್ ಸ್ಕ್ಯಾಮ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂದಾನ ನೆಪದಲ್ಲಿ ಕರೆಸಿ ಹಲ್ಲೆ ನಡೆಸಿದ ಆರೋಪದ ಮೇಲೆ ಮಹಿಳೆ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಬೆಂಗಳೂರಿನ ಲೋಕೇಶ್ ನೀಡಿದ ದೂರಿನ ಮೇರೆಗೆ ರವಿಕಿರಣ್, ರಕ್ಷಿತ್ ಸೇರಿದಂತೆ ನಾಲ್ವರ ವಿರುದ್ಧ ಕುವೆಂಪುನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿನ್ನತಂಬಿ ಆಪ್ತರು ಸೆಟಲ್ಮೆಂಟ್ ಮಾಡುವುದಾಗಿ ಕರೆಸಿ, ಕಲ್ಲು ಮತ್ತು ಕಬ್ಬಿಣದ ರಾಡ್ನಿಂದ ಲೋಕೇಶ್, ಹೇಮಾ, ಶೋಭಾ, ಪೂರ್ಣಿಮಾ, ಸಂತೋಷ್, ಮಹೇಶ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಗಾಯಾಳುಗಳು ಮೈಸೂರಿನ ಕೆ.ಆರ್. ಆಸ್ಪತ್ರೆ ಮತ್ತು ಟ್ರಾಮಾ ಕೇರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಎಸ್ಐ ಚನ್ನಬಸಪ್ಪ ಆಸ್ಪತ್ರೆಗೆ ತೆರಳಿ ದೂರು ದಾಖಲಿಸಿಕೊಂಡಿದ್ದಾರೆ.
