ಚಾಮರಾಜನಗರ: ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ ಎಎಸ್ಐ ಧನಂಜಯ ಅವರಿಗೆ ಪೊಲೀಸ್ ವರಿಷ್ಟಾದಿಕಾರಿಗಳು ಸನ್ಮಾನಿಸಿ, ಬೀಳ್ಕೊಡುಗೆ ನೀಡಿದರು.
ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಟಾದಿಕಾರಿ ಮುತ್ತುರಾಜು ಹಾಗೂ ಆಡಳಿತ ವರ್ಗ ಸಂಚಾರಿ ಠಾಣೆಯ ಎಎಸ್ ಐ ಧನಂಜಯ ಅವರಿಗೆ ಜಿಲ್ಲಾ ಪೊಲೀಸ್ ವತಿಯಿಂದ ಸನ್ಮಾನಿಸಿ ಅವರ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸಿ ಗೌರವಿಸಿ ಬೀಳ್ಕೊಟ್ಟರು.
ನಂತರ ಸಂಚಾರಿ ಠಾಣಾ ಇನ್ಸ್ ಪೆಕ್ಟರ್ ಹನುಮಂತ ಉಪ್ಪಾರ್, ಸಹೋದ್ಯೋಗಿಗಳು ಹಾಗೂ ಸಿಬ್ಬಂದಿಗಳೂ ಕೂಡಾ ಧನಂಜಯ ಅವರನ್ನು ಗೌರವಿಸಿ ಸನ್ಮಾನಿಸಿದರು.
