ಮೈಸೂರು: ಮೈಸೂರು ತಾಲ್ಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಚುನಾವಣೆಯಲ್ಲಿ ಅದ್ಯಕ್ಷರಾಗಿ ಜಯಭೇರಿ ಬಾರಿಸಿದ ಈರಪ್ಪನಕೊಪ್ಪಲು ಕಾವಿ ಬಸಪ್ಪ ಮತ್ತು 20 ಜನ ತಂಡದ ನಿರ್ದೇಶಕರುಗಳನ್ನ ಕನ್ನಡಾಂಬೆ ರಕ್ಷಣಾ ವೇದಿಕೆ ವತಿಯಿಂದ ಅಭಿನಂದಿಸಿ ಗೌರವಿಸಲಾಯಿತು.
ಜಯಶಾಲಿಗಳಾದ ಈರಪ್ಪನಕೊಪ್ಪಲು ಕಾವಿ ಬಸಪ್ಪ ಮತ್ತು ಅವರ ತಂಡ ಪುರುಷ ಅಭ್ಯರ್ಥಿಗಳು 13 ಜನ ಮತ್ತು ಏಳು ಜನ ಮಹಿಳಾ ಅಭ್ಯರ್ಥಿಗಳು ಸಮಾಜದ ವಿಶ್ವಾಸ, ಪ್ರೀತಿ ಹಾಗೂ ಆಶೀರ್ವಾದಗಳಿಗೆ ಪಾತ್ರರಾಗಿರುವುದು ಅತ್ಯಂತ ಸಂತಸದ ವಿಚಾರವಾಗಿದೆ.
ಅವರ ಈ ಗೆಲುವು ಕೇವಲ ವೈಯಕ್ತಿಕ ವಿಜಯವಲ್ಲ, ಸಮಾಜದ ಅಭಿವೃದ್ಧಿ, ಸಂಘಟನಾ ಶಕ್ತಿ ಮತ್ತು ಸೇವಾಭಾವನೆಗೆ ದೊರೆತ ಗೌರವವಾಗಿದೆ.
ಸಮಾಜದ ಏಳಿಗೆಗಾಗಿ ನಿರಂತರ ಶ್ರಮಿಸುತ್ತಾ, ಎಲ್ಲ ವರ್ಗದ ಜನರನ್ನು ಒಗ್ಗೂಡಿಸಿ ಮಹಾಸಭೆಯನ್ನು ಇನ್ನಷ್ಟು ಬಲಿಷ್ಠಗೊಳಿಸಿ ಸಮಾಜಮುಖಿ ಕಾರ್ಯಗಳಿಗೆ ಹೊಸ ದಿಕ್ಕು ನೀಡಲಿದ್ದಾರೆ ಎಂಬ ವಿಶ್ವಾಸ ಸಮಾಜದ ಜನರಲ್ಲಿ ಮೂಡಿದೆ.
ಸಮಾಜದ ಆಶೋತ್ತರಗಳನ್ನು ಹೊತ್ತು ಮಹಾಸಭೆಯ ಅಭಿವೃದ್ಧಿಗೆ ನಿಷ್ಠೆಯಿಂದ ದುಡಿಯುವ ಮೂಲಕ ಯುವ ಜನತೆಗೆ ಪ್ರೇರಣೆಯಾಗಲಿ, ಸಮಾಜದ ಏಕತೆ ಮತ್ತು ಸಂಘಟನಾ ಶಕ್ತಿ ಮತ್ತಷ್ಟು ವೃದ್ಧಿಸಲಿ ಎಂದು ಹಾರೈಸುತ್ತೇನೆ ಎಂದು ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷ ರಾಜಶೇಖರ್ ನುಡಿದರು.
ಇವರ ಆಡಳಿತಾವಧಿಯಲ್ಲಿ ಮಹಾಸಭೆ ಇನ್ನಷ್ಟು ಪ್ರಗತಿ ಪಥದಲ್ಲಿ ಸಾಗಲಿ ಎಂಬುದು ನಮ್ಮೆಲ್ಲರ ಆಶಯಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯ ಖಜಾಂಜಿ ನಂಜುಂಡ , ಮೈಸೂರು ಪ್ರಾಂತ್ಯ ಅಧ್ಯಕ್ಷ ಅಜಯ್ ಶೆಟ್ಟಿ ,
ಇ.ವಿ ನಾಗರಾಜ್ , ತಾರಾ, ವತ್ಸಲ, ರಶ್ಮಿ ಸಿಂಗ್, ಪಿ ಜಿ ಆರ್ ಎಸ್ ಎಸ್ ಸಂಸ್ಥೆಯ ಅಧ್ಯಕ್ಷರಾದ ಹರೀಶ್ ಯಾದವ್ , ಹರ್ಷ , ಚಿಕ್ಕಾಡನಹಳ್ಳಿ ಆನಂದ,ಬಸವರಾಜ್, ಲಿಂಗರಾಜಪ್ಪ ಸೇರಿ್ಂತೆ ವೇದಿಕೆಯ ಇತರೆ ಪದಾಧಿಕಾರಿಗಳು ಉಪಸ್ಥಿತರಿದ್ದರು.
