ಮೈಸೂರು: ಬ್ರಿಟಿಷರ ನಾಡಿಗೆ ಹೋಗಿ ಅವರ ವಿರುದ್ಧ ಹೋರಾಟ ನಡೆಸಿದ ಹಾಗೂ ಅದಕ್ಕಾಗಿ ಸಂಘಟನೆಯನ್ನು ಸಜ್ಜುಗೊಳಿಸಿದ ಸಾವರ್ಕರ್ ನಿಜವಾದ ವೀರ ಎಂದು ಸಂಸದಯದುವೀರ ಕೃಷ್ಣದತ್ತ ಚಾಮರಾಜ ಒಡೆಉರ್ ಬಣ್ಣಿಸಿದರು.
ಮೈಸೂರಿನ ಸಾವರ್ಕರ್ ಪ್ರತಿಷ್ಠಾನ ವತಿಯಿಂದ ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತದಲ್ಲಿ ಅಸಯೋಜಿಸಿದ್ದ
ಸ್ವಾತಂತ್ರ್ಯ ವೀರ ನಾಯಕ ದಾಮೋದರ ಸಾವರ್ಕರ್ ರವರ 143ನೇ ಜಯಂತಿ ಕಾರ್ಯಕ್ರಮದಲ್ಲಿ ಸಾವರ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಯದುವೀರ್ ಮಾತನಾಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ವಿನಾಯಕ ದಾಮೋದರ ಸಾವರ್ಕರ್ ಅವರು ತಮ್ಮ ಜೀವಿತಾವಧಿಯ ಬಹುಪಾಲು ಜೈಲಿನಲ್ಲಿ ಸವೆದು ತಮ್ಮನ್ನು ತಾವೇ ಸಮರ್ಪಿಸಿಕೊಂಡವರು. ಸ್ವಾತಂತ್ರ್ಯ ಬಂದ ನಂತರವೂ ಅವರು ಅನುಭವಿಸಿದ ಶಿಕ್ಷೆ, ನೋವು ಹೇಳತೀರದು, ಅಂಡಮಾನಿನ ಜೈಲಿನ ಚಿಕ್ಕ ಕೋಣೆಯೊಂದರಲ್ಲಿ ಕಠಿಣ ಕರಿನೀರಿನ ಶಿಕ್ಷೆ ಅನುಭವಿಸಿದ್ದರು, ಅಂತಹ ಮಹಾನ್ ವ್ಯಕ್ತಿಯ ಜಯಂತಿಯಂದು ಅವರ ತ್ಯಾಗವನ್ನು ನೆನೆದು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಿಳಿಸಿದರು.
ಇದೇ ವೇಳೆ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಾವರ್ಕರ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ರಾಕೇಶ್ ಭಟ್, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ, ಜಗದೀಶ್, ವಿಕ್ರಂ ಅಯ್ಯಂಗಾರ್, ಸಂದೇಶ್, ಪ್ರಮೋದ್ ಗೌಡ, ಸಂಜಯ್, ಸಂತೋಷ್, ಟಿ ಎಸ್ ಅರುಣ್, ದೀಪಕ್, ರವಿ, ಗೈಡ್ ಚಂದ್ರು, ಸಂಜಯ್ ಪ್ರಸನ್ನ, ಡಿ. ರಾಘವೇಂದ್ರ, ಚೇತನ್, ಭಾಗ್ಯರಾಜ್, ಮಧು ಸೋಮಶೇಖರ್, ಚಂದನ್ ಗೌಡ, ಮುರಳಿ, ನಾಗೇಂದ್ರ, ವಿಷ್ಣುವರ್ಧನ್ ಮತ್ತಿತರರು ಪಾಲ್ಗೊಂಡಿದ್ದರು.
