ಮೈಸೂರು: ದೀರ್ಘಾವದಿ ಮುಖ್ಯ ಮಂತ್ರಿ ಎಂಬ ಖ್ಯಾತಿಗೆ ಒಳಗಾಗಿರುವ ಸಿದ್ದರಾಮಯ್ಯ ಅವರಿಗೆ ಇಪಿಎಸ್ 95 ನಿವೃತ್ತ ನೌಕರರ ಕ್ಷೇಮಾಭಿವೃದ್ದಿ ಸಂಘದ ಪ್ರ,ಕಾರ್ಯ ದರ್ಶಿ ಮೈಸೂರು,
ಮೊಹನ ಕ್ರಿಷ್ಣ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ಕರ್ನಾಟಕದ ಮುಖ್ಯ ಮಂತ್ರಿಗಳಾಗಿ ಎಲ್ಲಾ ಪಕ್ಷದವರೂ ಆಡಳಿತ ನಡೆಸಿದ್ದಾರೆ,ಒಳ್ಳೆಯ ಆಡಳಿತವನ್ನೂ ಕೊಟ್ಟದ್ದಾರೆ,
ಆತೀ ಹೆಚ್ಚು ಆಡಳಿತ ಮಾಡಿದ ಹೆಚ್ಚು ಅಭಿವೃದ್ಧಿ ಮಾಡಿದ ದೇಶದಲ್ಲೇ ಹೆಚ್ಚು ಜನ ಮನ್ನಣೆ ಪಡೆದ ಹಸಿದ ಬಡವರಿಗೆ ಇಂದಿರಾ ಕ್ಯಾಂಟೀನ್ ಮಾಡಿ, ಅನ್ನಭಾಗ್ಯ ನೀಡಿದ ಸಿದ್ದರಾಮಯ್ಯ ಅವರು ಅಭಿನಂದನಾರ್ಹರು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿದೇಶಗಳು ಕಂಡ ಸ್ತ್ರೀಶಕ್ತಿ ಯೇಜನೆ ಪಡೆದ
ಒಂದು ಕೋಟಿ ಬಿಪಿಎಲ್ ಕಾರ್ಡ ಕುಟುಂಬದವರಿಗೆ ಐದು ಗ್ಯಾರಂಟಿ ಯೋಜನೆ ಮಾಡಿದ
ಎಲ್ಲಾ ಜಾತಿ ದರ್ಮದವರನ್ನು ಸಮಾನವಾಗಿ ನೋಡುವ, ಹಿಂದಿಳಿದವರನ್ನು ಮೇಲೆತ್ತುವ,
ರಾಜ್ಯದ 16 ಬಜೆಟ್ ಗಳನ್ನು ಮಂಡಿಸಿರುವ
ರಾಜ್ಯದ ಮಹಾನ್ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಹೃತ್ಪೂರ್ವಕ ನಮಸ್ಕಾರಗಳು ಎಂದು
ಮೊಹನ ಕ್ರಿಷ್ಣ ತಿಳಿಸಿದ್ದಾರೆ.ಜತೆಗೆ ಸಿದ್ದರಾಮಯ್ಯ ಅವರೊಂದಿಗೆ ಇರುವ ಒಂದು ಫೋಟೋ ಕೂಡಾ ಹಂಚಿಕೊಂಡಿದ್ದಾರೆ.
ಮಾಜಿ ಮುಖ್ಯ ಮಂತ್ರಿ ಡಿ.ದೇವರಾಜ ಅರಸು ಅವರ ದಾಖಲೆಯನ್ನು ಸಿದ್ದರಾಮಯ್ಯ ಅವರು ಬ್ರೇಕ್ ಮಾಡಿದ್ದಾರೆ,ಅವರುಗೆ ಅಭಿನಂದನೆಗಳು ಎಂದು ತಿಳಿಸಿದ್ದಾರೆ.
