ಮೈಸೂರು: ಮೈಸೂರು ನಗರದಲ್ಲಿ ಶಾಂತಿ, ಸುವ್ಯವಸ್ಥೆ ಹಾಗೂ ಸಾರ್ವಜನಿಕ ಭದ್ರತೆಯನ್ನು ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆಯು ಡ್ರೋನ್ಗಳನ್ನು ಬಳಸಿಕೊಂಡು ಪ್ರಮುಖ ಸ್ಥಳಗಳು ಮತ್ತು ಜನಸಂದಣಿ ಪ್ರದೇಶಗಳ ಮೇಲೆ ಪ್ರತಿದಿನ ಹದ್ದಿನ ಕಣ್ಣಿಟ್ಟಿದೆ.
ಇದೇ ಗುರುವಾರ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್-ಬ್ರದರ್ ವೃತ್ತ, ನಿಮ್ರಾ ಮಸೀದಿ ಮತ್ತು ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕೈಲಾಸಪುರಂ, ಸುನ್ನಿ ಚೌಕ ಸ್ಥಳಗಳಲ್ಲಿ ಡ್ರೋನ್ ಉಪಕರಣಗಳನ್ನು ಬಳಸುವ ಮೂಲಕ ಕಣ್ಗಾವಲು ಕಾರ್ಯಾಚರಣೆ ಕೈಗೊಳ್ಳಲಾಯಿತು.
ಮುಂದಿನ ದಿನಗಳಲ್ಲಿ ನಗರದಲ್ಲಿ ನಡೆಯಲಿರುವ ವಿವಿಧ ಬಂದೋಬಸ್ತ್ ಕರ್ತವ್ಯಗಳು, ಸಾರ್ವಜನಿಕ ಸಭೆಗಳು, ವಿಶೇಷ ಕಾರ್ಯಕ್ರಮಗಳು ಹಾಗೂ ಇತರ ಚಟುವಟಿಕೆಗಳ ಸಂದರ್ಭದಲ್ಲಿ ಮುನ್ಸೂಚನೆ ಅಥವಾ ಪೂರ್ವ ಜಾಗೃತಿ ಮಾಹಿತಿ ಸಂಗ್ರಹಣೆಗಾಗಿ ಡ್ರೋನ್ಗಳನ್ನು ಪರಿಣಾಮಕಾರಿಯಾಗಿ ಬಳಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
