ಮೈಸೂರು: ಡಿ.ಕೆ ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಿನ್ನೆಲೆಯಲ್ಲಿ
ಮೈಸೂರಿನಲ್ಲಿ ಅಭಿಮಾನಿಗಳ ಸಂಭ್ರಮ ಜೋರಾಗಿತ್ತು.
ನಗರದ ಚಾಮರಾಜ ಜೋಡಿ ರಸ್ತೆಯಲ್ಲಿ ಡಿ ಕೆ ಶಿ ಅಭಿಮಾನಿ ಬಳಗ ಡಿ.ಕೆ ಶಿವಕುಮಾರ್ ಅವರ ಬೃಹತ್ ಕಟೌಟ್ ಅಳವಡಿಸಿ, ಸಾರ್ವಜನಿಕರಿಗೆ ಸಿಹಿ ವಿತರಿಸಿ ಸಂಭ್ರಮಿಸಿದರು.
ಈ ಸಂಭ್ರಮದಲ್ಲಿ ಅಖಿಲ ಕರ್ನಾಟಕ ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗದ ಮೈಸೂರು ಘಟಕದ ಅಧ್ಯಕ್ಷ ಜಿ ರಾಘವೇಂದ್ರ, ಶೇಖರ್, ಕಿರಣ್,
ಎಸ್ ಎನ್ ರಾಜೇಶ್, ರವಿಚಂದ್ರ, ಚಂದ್ರು, ಲಕ್ಷ್ಮಣ,ನಾಗರಾಜು , ಮುಸಿರಾ, ಚಂದ್ರು, ಮಂಜು ,ವಿನೋದ್, ಮಾಯಣ್ಣ, ಪೂಜಾರಿ ನಟರಾಜ್,ಅನಿಲ್, ಯೋಗೇಶ್ ನಾಯ್ಡು, ಹರೀಶ್ ,ರಾಕೇಶ್ ಮತ್ತಿತರರು ಪಾಲ್ಗೊಂಡಿದ್ದರು.
