ಮೈಸೂರು: ಕೆಪಿಸಿಸಿ ಅಧ್ಯಕ್ಷರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಹುಟ್ಟು ಹಬ್ಬದ ಪ್ರಯುಕ್ತ
ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಲಾಯಿತು.
ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗದ ವತಿಯಿಂದ ಚಾಮರಾಜ ಜೋಡಿ ರಸ್ತೆಯಲ್ಲಿರುವ ವರ ನಟ ಡಾಕ್ಟರ್ ರಾಜಕುಮಾರ್ ಪ್ರತಿಮೆ ಮುಂಭಾಗ 100ಕ್ಕೂ ಹೆಚ್ಚು ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿ ನಂತರ ಚಾಮುಂಡಿ ಬೆಟ್ಟದಲ್ಲಿ ಡಿಕೆಶಿ ಹೆಸರಿನಲ್ಲಿ ಪೂಜೆ ಸಲ್ಲಿಸಿ ಚಾಮುಂಡೇಶ್ವರಿ ದೇವಿಯಲ್ಲಿ ವಿಶೇಷ ಪ್ರಾರ್ಥನೆ ಮಾಡಲಾಯಿತು.
ಈ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಜಿ ಶೀನಾಥ್ ಬಾಬು, ಡಿ.ಕೆ ಶಿವಕುಮಾರ್ ಎಂದರೆ ಕಾಂಗ್ರೆಸ್ ಕಾರ್ಯಕರ್ತರ ಒಂದು ಶಕ್ತಿ.ಅವರ ಬಲದಿಂದಲೇ ಇಂದು ರಾಜ್ಯದಲ್ಲೆಡೆ ವಿದ್ಯಾರ್ಥಿಗಳು ಮತ್ತು ಯುವಕರು ನಾವೆಲ್ಲ ಪ್ರತಿಭಟನೆ, ಚಳವಳಿ, ಸತ್ಯಾಗ್ರಹದಂತ ಹೋರಾಟ ಮಾಡುವ ಮನೋಭಾವನೆ ಬಂದಿದೆ. ಡಿ.ಕೆ ಶಿವಕುಮಾರ್ ಅವರು ಕೇವಲ ರಾಜಕೀಯವಾಗಿ ಅಲ್ಲದೆ ಸಾಮಾಜಿಕವಾಗಿ ಸಾಕಷ್ಟು ಕೆಲಸ ಮಾಡುತ್ತಾ ಬಂದಿದ್ದಾರೆ ಎಂದು ಹೇಳಿದರು.
ಕರ್ನಾಟಕದ ರಾಜಕಾರಣದಲ್ಲಿ ಅಪಾರ ಅನುಭವ ಹಾಗೂ ಪ್ರಬಲ ಶೂಟರ್ ಎಂದೇ ಖ್ಯಾತರಾಗಿರುವ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಬೇಕು ಎಂದು ವರಿಷ್ಠರಲ್ಲಿ ಜಿ.ಶ್ರೀನಾಥ್ ಬಾಬು ಮನವಿ ಮಾಡಿದರು.
ಈ ಎಲ್ಲಾ ಕಾರ್ಯಕ್ರಮದಲ್ಲಿ ಜಿ ರಾಘವೇಂದ್ರ,ಕೃಷ್ಣ,ನಾಗರಾಜ್ ಸುರೇಶ್, ಮಂಜೇಶ್, ಕಿರಣ್, ಯೋಗೇಶ್,ಹರೀಶ್ ನಾಯ್ಡು, ರಮೇಶ್, ಪ್ರಸನ್ನ,ಸಂತೋಷ್ ಕಿರಾಳು, ಕಿಶೋರ್, ಅರುಣ್, ಶಣ್ಮುಖ ಮತ್ತಿತರರು ಹಾಜರಿದ್ದರು.
