ವೆನಿಜುವೆಲಾ: ವೆನಿಜುವೆಲಾದ ಮಧ್ಯಂತರ ಅಧ್ಯಕ್ಷರಾಗಿ ಡೆಲ್ಸಿ ರೊಡ್ರಿಗಸ್ ಅವರು ಸಂಸತ್ತಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ವೆನಿಜುವೆಲಾ ಮೇಲೆ ದಾಳಿ ಮಾಡಿ, ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆ ಹಿಡಿದಿರುವ ಅಮೆರಿಕ ವಿಚಾರಣೆಗೆ ಒಳಪಡಿಸುತ್ತಿದೆ ಈ ಬೆಳವಣಿಗೆಯ ನಡುವೆಯೇ ಡೆಲ್ಸಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿ ಮಾತನಾಡಿದ ರೊಡ್ರಿಗಸ್, ವಾಷಿಂಗ್ಟನ್ಗೆ ಎಲ್ಲ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.
ನಮ್ಮ ನಾಯಕರನ್ನು ಅಪಹರಿಸಿ ಅಮೆರಿಕದಲ್ಲಿ ಒತ್ತೆಯಾಳಾಗಿರಿಸಿರುವ ಬಗ್ಗೆ ನೋವಿದೆ ಎಂದೂ ಹೇಳಿದ್ದಾರೆ.
ಕ್ಯಾರಕಸ್ ಮೇಲೆ ದಾಳಿ ಮಾಡಿ ಸಂಸತ್ತಿನ ಎಡಪಂಥೀಯ ನಾಯಕ ಮಡುರೊ ಅವರನ್ನು ಸೆರೆಹಿಡಿದ ಅಮೆರಿಕದ ಕ್ರಮವನ್ನು ಸಂಸತ್ತು ಖಂಡಿಸುತ್ತದೆ. ಇದು ಜಗತ್ತನ್ನು ಬೆಚ್ಚಿ ಬೀಳಿಸಿದೆ ಎಂದು ರೊಡ್ರಿಗಸ್ ಮಡುರೊಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.
ಡೆಲ್ಸಿ ರೊಡ್ರಿಗಸ್ಗೆ ಅವರ ಸಹೋದರನೂ ಆಗಿರುವ ರಾಷ್ಟ್ರೀಯ ಅಸೆಂಬ್ಲಿ ಶಾಸಕಾಂಗದ ಮುಖ್ಯಸ್ಥ ಜಾರ್ಜ್ ರೊಡ್ರಿಗಸ್ ಪ್ರಮಾಣವಚನ ಬೋಧಿಸಿದರು.
ನನ್ನ ಸಹೋದರ, ನನ್ನ ಅಧ್ಯಕ್ಷ ನಿಕೋಲಸ್ ಮಡುರೊ ಮೊರೊಸ್ ಅವರನ್ನು ಮರಳಿ ಕರೆತರಲು ಎಲ್ಲ ಕಾರ್ಯವಿಧಾನಗಳನ್ನು ನಡೆಸುವುದಾಗಿ ಭರವಸೆ ನೀಡಿದರು.
