ದ.ಆಫ್ರಿಕಾ: ದ.ಆಫ್ರಿಕಾದ
ಜೋಹಾನ್ಸ್ಬರ್ಗ್ ಮತ್ತು ಕೇಪ್ಟೌನ್ನಲ್ಲಿ ಸಾಮೂಹಿಕ ಶೂಟೌಟ್ ನಡೆದು 27 ಮಂದಿ ಬಲಿಯಾಗಿದ್ದಾರೆ.
ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ ಹಾಗೂ ಕೇಪ್ಟೌನ್ ನಗರಗಳಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ನಡೆದ ಎರಡು ಭೀಕರ ಸಾಮೂಹಿಕ ಗುಂಡಿನ ದಾಳಿಗಳು ನಡೆದಿದೆ.
ಘಟನೆಯಲ್ಲಿ 27 ಮಂದಿ ಮೃತಪಟ್ಟರೆ ಕೆಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಜೋಹಾನ್ಸ್ಬರ್ಗ್ನ ಬಾರ್ಗೆ ನುಗ್ಗಿದ 8 ಮಂದಿ ಬಂದೂಕುಧಾರಿಗಳು 17 ಜನರನ್ನು ಕೊಂದಿದ್ದಾರೆ.
ಈ ವೇಳೆ ಮುಸುಕುಧಾರಿಗಳು ಮೊಬೈಲ್ ದೋಚಿ ವಾಹನಗಳಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
ಕೇಪ್ಟೌನ್ ಮನರಂಜನಾ ತಾಣದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ 10 ಮಂದಿ ಅಸುನೀಗಿದ್ದಾರೆ.
ಈ ಘಟನೆ ಈ ಪ್ರಾಂತ್ಯದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಅಪರಾಧ ಪ್ರಕರಣಗಳಿಗೆ ಕೈಗನ್ನಡಿಯಂತಿದ್ದು ಆತಂಕಕ್ಕೆ ಕಾರಣವಾಗಿದೆ.
ಯಾವಾಗಲೂ ಒಂದಲ್ಲ ಒಂದು ರೀತಿಯ ಅಪರಾಧ ಘಟನೆಗಳಿಂದ ಬಳಲುತ್ತಿರುವ ದಕ್ಷಿಣಾ ಆಫ್ರಿಕಾದಲ್ಲಿ ಮತ್ತೆ ಗುಂಡಿನ ದಾಳಿ ಆಗಿದ್ದು,ನಾಗರೀಕರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
