ಹುಣಸೂರು: ಹುಣಸೂರು ತಾಲೂಕಿನ ತಾಲೂಕು ಪಂಚಾಯತ್ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಪ್ರಗತಿಪರ ಸಂಘಟನೆ ಒಕ್ಕೂಟ ನಜರ್ ಸಾಬ್ ಫೌಂಡೇಶನ್ ವತಿಯಿಂದ ಪಂಚಾಯತ್ ರಾಜ್ ವ್ಯವಸ್ಥೆ ಕುರಿತು ಕಾರ್ಯಗಾರ ಹಮ್ಮಿಕೊಳ್ಳಲಾಯಿತು.
ರೈತ ಸಂಘ ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗಳ ಬಗ್ಗೆ ಹಲವಾರು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಯಿತು.
ಹೋಬಳಿವಾರು ಪಂಚಾಯತ್ ರಾಜ್ ಕಾರ್ಯಗಾರ ಮಾಡಲು ದಿನಾಂಕ ನಿಗಧಿ ಮಾಡಲಾಯಿತು.
23.02.2026ರಂದು ಹನಗೂಡು ಹೋಬಳಿ, 24.02.2026 ಚಿಲುಕುಂದ, 25.02.2026 ಗಾವಡಗೆರೆ ಹೋಬಳಿ, 26.02.2026ರಂದು ಬಿಳಿಕೆರೆ ಹೋಬಳಿ, 27.02.2026ರಂದು ಬನ್ನಿಕುಪ್ಪೆ, 28.02.2026ರಂದು ಧರ್ಮಪುರ ದಲ್ಲಿ ಹಮ್ಮಿಕೊಳ್ಳಲಾಗುವುದು.
ಆಯಾ ಹೋಬಳಿಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಕುರಿತು ಕಾರ್ಯಗಾರ ಹಮ್ಮಿಕೊಂಡು ಆಯಾ ಹೋಬಳಿಯ ಮುಖಂಡರು, ಗ್ರಾಮಸ್ಥರು ಸಂಘದ ಪದಾಧಿಕಾರಿಗಳು ಭಾಗವಹಿಸಬೇಕೆಂದು ಮನವಿ ಮಾಡಲಾಯಿತು.
ಸಭೆಯಲ್ಲಿ ರೈತ ಸಂಘ ತಾಲೂಕು ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಪ್ರಗತಿಪರ ಸಂಘಟನೆ ಒಕ್ಕೂಟದ ಅಧ್ಯಕ್ಷ ಅತ್ತಿಗುಪ್ಪೆ ರಾಮಕೃಷ್ಣ, ಸಿಪಿಎಂ ಅಧ್ಯಕ್ಷ ಬಸವರಾಜು, ಡಿಎಸ್ಎಸ್ ಮುಖಂಡ ರಾಜು, ಚಿಕ್ಕಹುಣಸೂರು ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿ ರಾಜು ಕಲ್ಕುಣಿಕೆ, ಉಂಡವಾಡಿ ಚಂದ್ರೇಗೌಡ, ರೈತ ಸಂಘ ಯುವ ಕಾರ್ಯದರ್ಶಿ ರವಿ ನಾರಾಯಣ್, ಅಗ್ರಹಾರ ಸತೀಶ್ ಮುಂತಾದ ಪ್ರಗತಿಪರ ಸಂಘಟನೆ ಒಕ್ಕೂಟದವರು, ರೈತ ಸಂಘದ ಘಟಕ ಅಧ್ಯಕ್ಷರು ಪದಾಧಿಕಾರಿಗಳು ಭಾಗವಹಿಸಿದ್ದರು.
