ಮೈಸೂರು: ಈ ಮೊದಲೇ ತಮ್ಮ ಜನುಮದಿನವನ್ನು ಯಾರೂ ಕೂಡಾ ಅದ್ದೂರಿಯಾಗಿ ಆಚರಿಸಬಾರದು ಎಂದು ಹೇಳಿದ್ದರಿಂದ ಡಿಸಿಎಂ ಡಿ.ಕೆ.ಶಿವಕುಮಾರ್
ಅವರ ಹುಟ್ಟುಹಬ್ಬವನ್ನು ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಡಿ.ಕೆ ಶಿವಕುಮಾರ್ ಅಭಿಮಾನಿಗಳ ಬಳಗ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ವತಿಯಿಂದ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಗಿಡ ನೆಡುವ ವೇಳೆ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಗಳನ್ನು ಹಿಡಿದು ಅವರಿಗೆ ಒಳಿತಾಗಲಿ ಎಂದು ಹಾರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್ ಅವರು ಡಿ.ಕೆ ಶಿವಕುಮಾರ್ ಅವರು ವಿದ್ಯಾರ್ಥಿ ದೆಸೆಯಿಂದಲೂ ಉತ್ತಮ ನಾಯಕತ್ವವನ್ನು ಹೊಂದಿದ್ದರು ಎಂದು ಹೇಳಿದರು.
ಅಭಿವೃದ್ಧಿಯ ದೂರ ದೃಷ್ಟಿಯೊಂದಿಗೆ ಜನನಾಯಕರಾದ ಅವರು ವಿದ್ಯಾರ್ಥಿ ದೆಸೆಯಿಂದಲೂ ಹೋರಾಟವನ್ನು ಮೈಗೂಡಿಸಿಕೊಂಡು ವಿದ್ಯಾರ್ಥಿ ನಾಯಕರಾಗಿ ಜಿಲ್ಲಾಪಂಚಾಯತ್ ಸದಸ್ಯರಾಗಿ, ಶಾಸಕರಾಗಿ ಮತ್ತು ಸಚಿವರಾಗಿ ಹಲವು ಖಾತೆಗಳನ್ನು ನಿರ್ವಹಿಸಿದ್ದಾರೆ ಎಂದು ತಿಳಿಸಿದರು.
ಎಐಸಿಸಿ ಸದಸ್ಯರಾಗಿ ಕೆಪಿಸಿಸಿ ಕಾರ್ಯ ಅಧ್ಯಕ್ಷರಾಗಿ ಮತ್ತು ಅಧ್ಯಕ್ಷರಾಗಿ ಸಂಘಟನೆ ಮೂಲಕ ಇಂದು ಕರ್ನಾಟಕ ರಾಜ್ಯದ ಉಪಮುಖ್ಯ ಮಂತ್ರಿಗಳಾಗಿ ಉತ್ತಮ ಜನಮನ ಮೆಚ್ಚುವ ಕೆಲಸ ಕಾರ್ಯ ಮಾಡುತ್ತಿದ್ದಾರೆ.ಇಂತಹ ಜನನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ದೇವರು ಇನ್ನೂ ಹೆಚ್ಚು ಶಕ್ತಿ ನೀಡಲಿ ಹಾಗೂ ಚಾಮುಂಡೇಶ್ವರಿಯಮ್ಮನವರ ಆಶೀರ್ವಾದ ಇರಲಿ ಎಂದು ಹೇಳಿದರು.
ಈ ವೇಳೆ ನಗರ ಕಾಂಗ್ರೆಸ್ ಕಾರ್ಯದರ್ಶಿ, ಡಿ.ಕೆ ಶಿವಕುಮಾರ್ ಅಭಿಮಾನಿ ಬಳಗದ ಶ್ರೀನಾಥ್ ಬಾಬು, ಪಂಚಾಯತ್ ರಾಜ್ ಕಾರ್ಯದರ್ಶಿ ಲೋಕೇಶ್, ಜಿ. ರಾಘವೇಂದ್ರ, ಪರಿಸರ ಬಳಗದ ಕೃಷ್ಣಪ್ಪ ಘಂಟೆಯ, ಎಪಿಎಂಸಿ ರಾಮಚಂದ್ರ, ಸೇವಾದಳ ಕಾರ್ಯಾಧ್ಯಕ್ಷ ಮೋಹನ್, ಹರೀಶ್ ನಾಯ್ಡು, ರಮೇಶ ರಾಮಪ್ಪ, ಹಿನಕಲ್ ಉದಯ್, ಡೈರಿ ವೆಂಕಟೇಶ,ದಿನೇಶ್ ಪಾಂಡವಪುರ ಉಪಸ್ಥಿತರಿದ್ದರು.
