ಮೈಸೂರು: ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ಕಲಬುರ್ಗಿ ವಿಭಾಗ(ತಿಂಥಣಿ ಬ್ರಿಡ್ಜ್)ದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಸಿದ್ಧರಾಮಾನಂದ ಮಹಾಸ್ವಾಮಿ ಅವರಿಗೆ ಮೈಸೂರಿನ ಕನಕ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷರಾದ ಬಿ ಸುಬ್ರಹ್ಮಣ್ಯ, ನಗರ ಪಾಲಿಕೆ ಮಾಜಿ ಮೇಯರ್ ಟಿ.ಬಿ ಚಿಕ್ಕಣ್ಣ ಮತ್ತಿತರರು ಸಿದ್ಧರಾಮಾನಂದ ಮಹಾಸ್ವಾಮಿ ಅವರ ಕುರಿತು ಮಾತನಾಡಿದರು.ಶ್ರೀಗಳ ಕಾರ್ಯಗಳನ್ನು ಸ್ಮರಿಸಿದರು.
ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪುಷ್ಪಲತಾ ಚಿಕ್ಕಣ್ಣ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬೀರಿಹುಂಡಿ ಬಸವಣ್ಣ, ನಗರ ಪಾಲಿಕೆ ಮಾಜಿ ಸದಸ್ಯರಾದ ಗೋಪಿ ,ಶಿವಣ್ಣ, ಮುಖಂಡರುಗಳಾದ ಬಸವರಾಜ್, ರವಿ, ದೊಡ್ಡೇಗೌಡ, ಕಮಲ, ಹರೀಶ್, ಬೀರೇಶ್, ನಾಗರಾಜ್, ಪ್ರಭು, ಕರಿಗೌಡ, ಮಹೇಶ್, ಸಿದ್ದಪ್ಪ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.
