ಬಸವನಬಾಗೇವಾಡಿ: ಸ್ವಿಫ್ಟ್ ಡಿಸೈರ್ ಕಾರು ಉರುಳಿಬಿದ್ದ ಪರಿಣಾಮ ಶ್ರೀಶೈಲಕ್ಕೆ ಹೊರಟಿದ್ದ ನಾಲ್ವರಲ್ಲಿ ಇಬ್ಬರು ಮೃತಪಟ್ಟ ಘಟನೆ ಬೆಳಿಗ್ಗೆ ನಗರದ ಬಸವನಹಟ್ಟಿ ಕ್ರಾಸ್
ಬಳಿ ನಡೆದಿದೆ.
ಶುಕ್ರವಾರ ಬೆಳಗ್ಗೆ 7.30 ಕ್ಕೆ ನಗರದ ಬಸವನಹಟ್ಟಿ ಕ್ರಾಸ್ ಹತ್ತಿರ ಕಾಗವಾಡದಿಂದ ಶ್ರೀಶೈಲಕ್ಕೆ ತೆರಳುತ್ತಿದ್ದ ಸ್ವಿಫ್ಟ್ ಡಿಸೈರ್ ಕಾರು ಉರುಳಿಬಿದ್ದಿದೆ.
ಕಾರಿನಲ್ಲಿದ್ದ ನಾಲ್ಕು ಜನರಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಚಂದ್ರವ್ವ ಟಕ್ಕೆನ್ನವರ (70 ) ಹಾಗೂ ಕಾಮಪ್ಪ ಅವರಾದಿ ( 65) ಮೃತ ದುರ್ದೈವಿಗಳು. ಇಬ್ಬರು ಗಂಭೀರ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬಸವನಬಾಗೇವಾಡಿ ಸಿಪಿಐ ಗುರುಶಾಂತ್ ದಾಶಾಳ ತಿಳಿಸಿದ್ದಾರೆ.
ಬಸವನಬಾಗೇವಾಡಿ ಪೊಲೀಸರು ಪ್ರಕರಣ ದಾಖಲುಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
