ಇರಾಕ್: ಇರಾಕ್ನಲ್ಲಿ ಅಮೇರಿಕಾ ವೈಮಾನಿಕ ಇಂಧನ ತುಂಬುವ KC 135 ವಿಮಾನ ಅಪಘಾತಕ್ಕೀಡಾಗಿ ಆರು ಸಿಬ್ಬಂದಿ ಸಾವನ್ನಪ್ಪಿದ್ದಾರೆ.
ಇದನ್ನು ಅಮೇರಿಕಾ ಮಿಲಿಟರಿಯವರು ಖಚಿತಪಡಿಸಿದ್ದಾರೆ.
ಆದರೆ ವಿಮಾನ ಪತನಕ್ಕೂ ಯುದ್ದಕ್ಕೂ ಸಂಬಂಧವಿಲ್ಲ,ಈ ಘಟನೆಯು ಗುಂಡಿನ ದಾಳಿಯಿಂದ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ಪಶ್ಚಿಮ ಇರಾಕ್ನಲ್ಲಿ ಪತನಗೊಂಡ US KC-135 ಇಂಧನ ತುಂಬುವ ವಿಮಾನದಲ್ಲಿದ್ದ ಎಲ್ಲಾ ಆರು ಸಿಬ್ಬಂದಿಗಳು ಸಾವನ್ನಪ್ಪಿದ್ದು, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ.
ಎರಡು ವಿಮಾನಗಳು ಈ ಕಾರ್ಯಾಚರಣೆಯ ಭಾಗವಾಗಿದ್ದವು, ಅವುಗಳಲ್ಲಿ ಒಂದು ಪಶ್ಚಿಮ ಇರಾಕ್ನಲ್ಲಿ ಅಪ್ಪಳಿಸಿದರೆ, ಇನ್ನೊಂದು ಸುರಕ್ಷಿತವಾಗಿ ಲ್ಯಾಂಡ್ ಆಗಿದೆ.
