ಮೈಸೂರು: ಗ್ರಾಮಾಂತರ ಯುವ ಸಮಿತಿ ವತಿಯಿಂದ ಬಸವ ಜಯಂತಿ ಪ್ರಯುಕ್ತ ಮೈಸೂರಿನ ಜಯಪುರ ಹೋಬಳಿ ಮತ್ತು ಇಲವಾಲ ಹೋಬಳಿಯಲ್ಲಿ ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಯಿತು.
ಜಯಪುರ ಸಮೀಪದ ದಾರಿಪುರದ ಶ್ರೀ ಮಂಟೇಸ್ವಾಮಿ,ಶ್ರೀ ಸಿದ್ದಪ್ಪಾಜಿ, ಶ್ರೀ ಮಹಾಗಣಪತಿ ಸನ್ನಿಧಿಯಿಂದ ಬೈಕ್ ರ್ಯಾಲಿ ಪ್ರಾರಂಭಿಸಿ ಸುಮಾರು 45 ಕಿ.ಮೀ ಚಲಿಸಿ ಬಸವ ತತ್ವಗಳ ಕುರಿತು ಜಾಗೃತಿ ಮೂಡಿಸುತ್ತಾ ಘೋಷಣೆಗಳನ್ನು ಕೂಗುತ್ತಾ ಎಲ್ಲರ ಗಮನ ಸೆಳೆಯಲಾಯಿತು.
ಯುವ ಘಟಕ ಅಧ್ಯಕ್ಷರಾದ ಬೀರಿಹುಂಡಿ ಸೋಮಶೇಖರ್, ಸಮಿತಿ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಡಿ, ಮಾಧ್ಯಮ ಸಂಚಾಲಕರಾದ ದಾರಿಪುರ ಚಂದ್ರಶೇಖರ್, ಯೋಗೇಶ್ ಡಿ ಸಾಲುಂಡಿ, ಗಿರೀಶ್, ನಟರಾಜ್, ಮರಡಗಳ್ಳಿ, ಶಿವಮಲ್ಲು, ವಿಜಯ್, ಮನೋದೇವಗಳ್ಳಿ, ವರುಣ್, ವಿನಯ್ ಮತ್ತಿತರರು ಪಾಲ್ಗೊಂಡಿದ್ದರು.
