ಮೈಸೂರು: ಮೈಸೂರಿನ ಶ್ರೀರಾಂಪುರದ
ಲ್ಲಿರುವ ಬೆಳಕು ವಾತ್ಸಲ್ಯ ಧಾಮದ ಹಿರಿಯ ನಾಗರಿಕರಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ ಸ್ನೇಹ ಬಳಗದ ವತಿಯಿಂದ ಎಳನೀರು,ಡ್ರೈ ಫ್ರೂಟ್ಸ್, ಹಣ್ಣು ಹಂಪಲು ವಿತರಿಸುವ ಸೇವಾ ಕಾರ್ಯದ ಮೂಲಕ ಬುದ್ಧ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜೆ.ಡಿ.ಎಸ್. ಮುಖಂಡ ಪ್ರಕಾಶ್ ಪ್ರಿಯದರ್ಶನ್, ಭಗವಾನ್ ಬುದ್ಧರು ತಿಳಿಸಿರುವ ಪಂಚಶೀಲ ತತ್ವಗಳಾದ ಸುಳ್ಳು ಹೇಳದಿರುವುದು, ಹಿಂಸೆ ಮಾಡದೇ ಇರುವುದು, ಕಳ್ಳತನ ಮಾಡಬಾರದು,
ಧೂಮಪಾನ,ಮದ್ಯಪಾನ ಮಾಡದಿರುವುದು, ಕಾಮ, ಮಿತ್ಯಾಚಾರ ವರ್ಜನೆ ಮಾಡುವುದರಿಂದ ಮನುಷ್ಯನಿಗೆ ಶಾಂತಿ, ನೆಮ್ಮದಿ ದೊರೆಯಲಿದೆ ಎಂದು ಹೇಳಿದರು.
ಭಗವಾನ್ ಬುದ್ಧರು ಈ ತತ್ವಗಳನ್ನು ಬೋಧಿಸಿ ಜಗತ್ತಿಗೆ ಶಾಂತಿ ಮತ್ತು ಜ್ಞಾನದ ಬೆಳಕನ್ನು ನೀಡಿದ ಮಹಾಪುರು.ಅವರನ್ನು ಸ್ಮರಿಸುವುದು, ಅವರ ತತ್ವ ಆದರ್ಶಗಳನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ, ದಾನ ಮತ್ತು ಧ್ಯಾನದಿಂದ ಜನನ – ಮರಣ ಸಂಕೋಲೆಯನ್ನು ಕಳೆದುಕೊಳ್ಳಬಹುದು ಎಂದು ತಿಳಿಸಿರುವ ಬುದ್ಧರ ಹಾದಿಯಲ್ಲಿ ನಾವೆಲ್ಲರೂ ಸಾಗೋಣ ಎಂದು ಪ್ರಕಾಶ್ ಪ್ರಿಯದರ್ಶನ್ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ವಾತ್ಸಲ್ಯ ಸೇವಾ ಫೌಂಡೇಶನ್ ಸಂಸ್ಥಾಪಕ ರವಿಕುಮಾರ್ ,
ಬ್ಲಡ್ ಆನ್ ಕಾಲ್ ಕ್ಲಬ್, ಮೈಸೂರು ಸಂಸ್ಥಾಪಕ ದೇವೇಂದ್ರ ಪರಿಹಾರಿಯಾ, ಸಮಾಜ ಸೇವಕಿ ವಿದ್ಯಾ, ಅಶ್ವಿನಿ, ಬಿಜೆಪಿ ಮುಖಂಡ ಪುರುಷೋತ್ತಮ್,ಗಾಯಕ ಯಶ್ವಂತ್ ಕುಮಾರ್, ರಾಜೇಶ್ ಕುಮಾರ್,ಮಹೇಶ, ದತ್ತ, ನಿರೀಕ್ಷಿತ್ ಮತ್ತಿತರರು ಹಾಜರಿದ್ದರು.
