ಬೆಳಗಾವಿ: ಜನರಿಗೆ ಔಷಧಿ ಕೊಟ್ಟು ಕಾಪಾಡಬೇಕಾದ ವೈದ್ಯನೇ ಡ್ರಗ್ಸ್ ಅಡಿಕ್ಟ್ ಆದ ಪ್ರಸಂಗ ಬೆಳಗಾವಿಯಲ್ಲಿ ವರದಿಯಾಗಿದೆ.
ಅದೂ ಸರಕಾರಿ ವೈದ್ಯ ಮನೆಯಲ್ಲೇ ಗಾಂಜಾ ಪತ್ತೆಯಾಗಿದ್ದು,ಜನರಲ್ಲಿ ಅಚ್ಚರಿ ಹಾಗೂ ಆತಂಕ ಮೂಡಿಸಿದೆ.
ಈ ಪ್ರಕರಣದಲ್ಲಿ ವೈದ್ಯನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸರಕಾರಿ ಹಿರಿಯ ವೈದ್ಯ ರಾಹುಲ್ ಬಂಟಿ ಎಂಬಾತ ಗಾಂಜಾ ಸೇವನೆ ಅಭ್ಯಾಸ ಮಾಡಿಕೊಂಡಿರುವುದು ಬೆಳಕಿಗೆ ಬಂದಿದ್ದು,
ವಿಷಯ ತಿಳಿದು,ಪೊಲೀಸರು ಪರಿಶೀಲಿಸಲಾಗಿ ಶಿವಬಸವ ನಗರದ ವೈದ್ಯನ ಮನೆಯಲ್ಲಿ 134 ಗ್ರಾಂ ಗಾಂಜಾ ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.
ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ರಾಹುಲ್ ಬಂಟಿ ಮನೆಗೆ ದಾಳಿ ಮಾಡಿ ಆತನ ಬೆಡ್ ರೂಮ್ ನಲ್ಲಿ ಬಚ್ಚಿಟ್ಟಿದ್ದ ಗಾಂಜಾವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ವೈದ್ಯನ ವಿಚಾರಣೆ ನಡೆಸಿದ್ದಾರೆ.
