ಮೈಸೂರು: ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ ಮುಂದಿನ ವರ್ಷ ಹೊಸ ವರ್ಷದ ಆಚರಣೆಯನ್ನು ನಿಷೇಧಿಸುವಂತೆ ಸರ್ಕಾರಕ್ಕೆ ಕನ್ನಡ ಚಳವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಆಗ್ರಹಿಸಿದ್ದಾರೆ.
ಗಾಂಧೀಜಿ ಅವರು ಮಧ್ಯಪಾನ ರಹಿತದ ಭಾರತದ ಕನಸು ಕಂಡಿದ್ದರು. ಗಾಂಧೀಜಿ ಕಂಡ ಕನಸಿನ ಭಾರತ ಇಂದು ಸ್ವೇಚ್ಛಾಚಾರದ ಗೂಡಾಗ ಹೊರಟಿದೆ ಎಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಮಧ್ಯಪಾನದ ವಿರುದ್ಧ ಬಲವಾಗಿ ಮಹಾತ್ಮ ಗಾಂಧೀಜಿ ಹೋರಾಡಿದ್ದರು. ಭಾರತ ದೇಶವನ್ನು ಮಧ್ಯ ಮುಕ್ತ ಮಾಡಲು ದೊಡ್ಡ ಆಂದೋಲನ ನಡೆಸಿದ್ದರು. ಕುಟುಂಬಗಳ ಸುಸ್ಥಿರತೆಗಾಗಿ ಮತ್ತು ದೇಶದ ಉದ್ಧಾರಕ್ಕಾಗಿ ಮದ್ಯಪಾನದಿಂದ ದೂರವಿರಬೇಕೆಂದು ಕರೆ ನೀಡಿದ್ದರು.
ಆದರೆ ಇಂದು ನಮ್ಮ ಬಸವಾದಿ ಶರಣರ ನಾಡಾದ ಕರ್ನಾಟಕ ರಾಜ್ಯದಲ್ಲಿ ಹೊಸ ವರ್ಷದ ಆಚರಣೆ ನೆಪದಲ್ಲಿ ಎಂ ಜಿ ರಸ್ತೆಯಲ್ಲಿ ಯುವಕ ಯುವತಿಯರು ಮದ್ಯ ಸೇವಿಸಿ ಹುಚ್ಚಾಟ ಮೇರೆಯುತ್ತ ಇರುವುದು ದುರದುಷ್ಟಕರ ಸಂಗಾತಿಯಗಿದೆ ಎಂದ್ದಿದ್ದರೆ.
ಗಾಂಧೀಜಿ ಅವರು ದೇಶವನ್ನು ಬ್ರಿಟಿಷ್ ದಾಸ್ಯದಿಂದ ಮುಕ್ತಗೊಳಿಸುವುದರ ಜೊತೆಗೆ ಕುಟುಂಬಗಳ ಉತ್ತಮ ಜೀವನಕ್ಕಾಗಿ ಮಧ್ಯ ಮುಕ್ತಗೊಳಿಸಲು ದೊಡ್ಡ ಆಂದೋಲನವನ್ನು ಪ್ರಾರಂಭಿಸಿದರು.
ಮದ್ಯಪಾನವು ವ್ಯಕ್ತಿಯ ಜೀವನ ಮತ್ತು ಸಮಾಜದ ಮೇಲೆ ನಕಾರಾತ್ಮಕ ಪರಿಣಾಮವು ಬೀರುತ್ತದೆ,ಆದರೆ ಇಂದಿನ ಆಧುನಿಕ ಯುಗದ ಯುವ ಜನತೆ ಮದ್ಯಪಾನವನ್ನು ನೆಪಕ್ಕೊಂದು ದಿನಾಚರಣೆಯ ಹೆಸರಿನಲ್ಲಿ ಗಂಡು, ಹೆಣ್ಣು ಎಂಬ ಭೇದವಿಲ್ಲ ಕುಡಿತದ ದಾಸರಾಗಿದ್ದಾರೆ. ಮಧ್ಯಪಾನ ಮುಕ್ತ ಭಾರತದ ಕನಸು ಕಂಡಿದ್ದ ಗಾಂಧೀಜಿ ಅವರ ಹೆಸರಿಗೆ ಕಳಂಕ ತರುವ ಪರಿಸ್ಥಿತಿ ಇಂದು ಬೆಂಗಳೂರಿನ ಮಹಾತ್ಮ ಗಾಂಧೀಜಿ ರಸ್ತೆಗೆ ಅಂದರೆ ಎಂ. ಜಿ.ರಸ್ತೆಗೆ ಬಂದೊದಗಿದೆ. ಈ ರೇತಿಯ ಕೆಟ್ಟ ಆಚರಣೆಯಿಂದ ಎಂ. ಜಿ. ರಸ್ತೆಯನ್ನು ಮುಕ್ತಗೊಳಿಸಿಸುವ ಜವಾಬ್ದಾರಿ ಸರ್ಕಾರದ ಕೈಯಲ್ಲಿದೆ ಎಂದು ತೇಜಸ್ವಿ ಹೇಳಿದ್ದಾರೆ.
ಬೆಂಗಳೂರಿನ ಎಂ ಜಿ ರಸ್ತೆಯಲ್ಲಿ ಹೊಸ ವರ್ಷದ ಆಚರಣೆಯನ್ನು ನಿಷೇಧ ಮಾಡಬೇಕು, ಆಚರಣೆಗೆ ಪರ್ಯಾಯ ವ್ಯವಸ್ಥೆ ಮಾಡಬೇಕು
ಎಂದು ತೇಜಸ್ವಿ ನಾಗಲಿಂಗ ಸ್ವಾಮಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
