ಮೈಸೂರು: ಭೈರವಿ ಗೌಡತಿ ಬಳಗದ ವತಿಯಿಂದ ಸುಗ್ಗಿ ಸಂಕ್ರಾಂತಿ ಹಬ್ಬದ ಆಚರಣೆಯನ್ನು ವಿಜಯನಗರ ಎರಡನೇ ಹಂತದಲ್ಲಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ವಿಶೇಷವಾಗಿ ಆಚರಣೆ ಮಾಡಲಾಯಿತು.
ಸುಗ್ಗಿಯ ಹಿಗ್ಗನ್ನು ನೆನಪಿಸುವ ಹಾಗೆ ದಾನ್ಯಗಳು ಹಾಗೂ ಕಬ್ಬು ಎಳ್ಳು ಬೆಲ್ಲವನ್ನು ತಂದು ಸಂಕ್ರಾಂತಿ ಹಬ್ಬದ ಮೇರುಗನ್ನು ಹೆಚ್ಚಿಸಲಾಯಿತು.
ಕೋಲಾಟ ಆಡುವ ಮೂಲಕ ಎಲ್ಲರೂ ಸಂತಸ ಸಂಭ್ರಮದಿಂದ ಸುಗ್ಗಿ ಸಂಕ್ರಾಂತಿ ಆಚರಣೆ ಮಾಡಿದರು.
ಸಂದರ್ಭದಲ್ಲಿ ಭೈರವಿ ಬಳಗದ ಪರವಾಗಿ ವಿವಿಧ ಗೌಡತಿ ಬಳಗದ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ಭೈರವಿ ಬಳಗದ ಅಧ್ಯಕ್ಷೆ ಪ್ರೇಮ ಶಂಕರೇ ಗೌಡ, ಪದಾಧಿಕಾರಿಗಳಾದ ರೇಣುಕಾ ಜಗದೀಶ್, ರಾಜೇಶ್ವರಿ ನಾಗರಾಜ್, ಉಮಾನಾಗೇಶ್, ರೇಣುಕಾ ಜಯರಾಮ್,ವಸಂತ ನಾಗರಾಜ್, ಗಾಯಿತ್ರಿ ಜಗದೀಶ್,ಸವಿತ ಹಾಗೂ ಭೈರವಿ ಬಳಗದ ಗೌಡತಿ ಸದಸ್ಯೆಯರು ಉಪಸ್ಥಿತರಿದ್ದರು.
