ಮೈಸೂರು: ದಕ್ಷಿಣ ಪಥೇಶ್ವರ ಇಮ್ಮಡಿ ಪುಲಿಕೇಶಿ ಕಾಲದ ವಾತಾಪಿ ಗಣಪತಿಯನ್ನು ಮರಳಿ ಕರ್ನಾಟಕಕ್ಕೆ ತರುವಂತೆ ಸರ್ಕಾರಕ್ಕೆ ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗಸ್ವಾಮಿ ಮನವಿ ಮಾಡಿದ್ದಾರೆ.
ವಾತಾಪಿ ಗಣಪತಿಯು ಕರ್ನಾಟಕದ ಬಾದಾಮಿ (ವಾತಾಪಿ) ಚಾಲುಕ್ಯರಿಂದ ಪೂಜಿಸಲ್ಪಟ್ಟ ವಿಶಿಷ್ಟ ಗಣೇಶ ಮೂರ್ತಿ. ಕ್ರಿ.ಶ. 642ರಲ್ಲಿ ಪಲ್ಲವ ರಾಜ ನರಸಿಂಹವರ್ಮನ್-I ಬಾದಾಮಿಯನ್ನು ಗೆದ್ದಾಗ, ಅವರ ಸೇನಾಪತಿ ಪರಂಜ್ಯೋತಿ ಈ ವಿಗ್ರಹವನ್ನು ತಮಿಳುನಾಡಿನ ತಿರುಚೆಂಕಟ್ಟಂಕುಡಿಗೆ ತಂದರು.
ದಕ್ಷಿಣ ಪಥೇಶ್ವರ, ನೌಕ ಪಡೆಯ ಪಿತಾಮಹ ಇಮ್ಮಡಿ ಪುಲಿಕೇಶಿ ಅರಸನು ಪೂಜಿಸುತ್ತಿದ್ದ ವಾತಾಪಿ ಗಣಪತಿಯ ವಿಗ್ರಹವನ್ನು ಲೂಟಿ ಮಾಡಿದ್ದಾರೆ.
ಆದರೆ ಆ ವಿಶೇಷ ವಾತಾಪಿ ಗಣಪತಿ ವಿಗ್ರಹವನ್ನು ತಮಿಳು
ನಾಡಿನಿಂದ ಪಡೆದುಕೊಂಡು ಕರ್ನಾಟಕಕ್ಕೆ ತಂದು ರಾಜ್ಯದಲ್ಲಿನ ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರದಲ್ಲಿ ಬೃಹತ್ ದೇವಾಲಯ ನಿರ್ಮಿಸ ಬೇಕೆಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಐತಿಹಾಸಿಕ ಮೂರ್ತಿಯು ಈಗ ತಮಿಳುನಾಡಿನ ಉತ್ರಪತಿಶ್ವರಸ್ವಾಮಿ ದೇವಾಲಯ ದಲ್ಲಿದೆ
ಈ ವಿಗ್ರಹವು ಮೂಲತಃ ಬಾದಾಮಿ ಚಾಲುಕ್ಯರ ರಾಜಧಾನಿ ವಾತಾಪಿಯ (ಈಗಿನ ಬಾದಾಮಿ, ಕರ್ನಾಟಕ) ಶೈವ ದೇವಾಲಯದಲ್ಲಿ ನೆಲೆಸಿತ್ತು.
ಯುದ್ಧದ ಲೂಟಿ: ಕ್ರಿ.ಶ. 642ರಲ್ಲಿ ಪಲ್ಲವ-ಚಾಲುಕ್ಯ ಯುದ್ಧದಲ್ಲಿ ಪಲ್ಲವ ಸೇನಾಪತಿ ಪರಂಜ್ಯೋತಿ ವಾತಾಪಿಯನ್ನು ವಶಪಡಿಸಿಕೊಂಡು, ಅಲ್ಲಿನ ಸುಂದರ ಗಣಪತಿ ವಿಗ್ರಹವನ್ನು ಯುದ್ಧದ ಕೊಳ್ಳೆಯಾಗಿ ತಮ್ಮ ಊರಾದ ತಿರುಚೆಂಕಟ್ಟಂಕುಡಿಗೆ (ತಮಿಳುನಾಡು) ತೆಗೆದುಕೊಂಡು ಬಂದರು ಎಂಬ ಇತಿಹಾಸವಿದೆ
ಈ ಮೂರ್ತಿಯನ್ನು ತಿರುಚೆಂಕಟ್ಟಂಕುಡಿಯ ಉತ್ರಪತಿಶ್ವರಸ್ವಾಮಿ ದೇವಾಲಯ ದಲ್ಲಿರುವ ಚಿಕ್ಕ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಪ್ರದೇಶವನ್ನು ‘ಗಣಪತಿಶ್ವರಂ’ ಎಂದೂ ಕರೆಯುತ್ತಾರೆ.
ಈ ಗಣೇಶನ ವಿಗ್ರಹವು ನಾಲ್ಕು ಕೈಗಳನ್ನು ಹೊಂದಿದ್ದು, ಒಂದು ಕೈಯಲ್ಲಿ ಕಬ್ಬು, ಇನ್ನೊಂದು ಕೈಯಲ್ಲಿ ಮುರಿದ ಹಲ್ಲು ಮತ್ತು ಪಾಶ-ಅಂಕುಶಗಳನ್ನು ಹಿಡಿದುಕೊಂಡಿದೆ.
ಬಾದಾಮಿಯ ಕೆಳಗಣ ಶಿವಾಲಯದಲ್ಲಿ ವಿಗ್ರಹ ಇಲ್ಲದಿರುವುದು ಈ ದಂತಕಥೆಗೆ ಪುಷ್ಟಿ ನೀಡುತ್ತದೆ, ಆದ ಕಾರಣ ರಾಜ್ಯ ಸರ್ಕಾರ ಅಖಂಡ ಭಾರತವನ್ನು ಆಳಿದ ಅರಸ ಇಮ್ಮಡಿ ಪುಲಿಕೇಶಿಯ ಕಾಲದ ವಾತಾಪಿ ಗಣಪತಿಯ ವಿಗ್ರಹವನ್ನು ಮರಳಿ ಪಡೆಯಬೇಕಿದೆ ಎಂದು ತೇಜಸ್ವಿ ಹೇಳಿದ್ದಾರೆ.
ಕರ್ನಾಟಕ ರಾಜ್ಯದ ಬಾದಾಮಿ ಚಾಲುಕ್ಯರ ರಾಜಧಾನಿಯಾಗಿದ್ದ ( ವಾತಾಪಿ ) ಇಂದಿನ ಬಾದಾಮಿ ನಗರದಲ್ಲಿ ಬೃಹತ್ ದೇವಾಲಯ ನಿರ್ಮಿಸಬೇಕೆಂದು ಕನ್ನಡ ಕ್ರಾಂತಿದಳ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗ ಸ್ವಾಮಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
