ಕೊಳ್ಳೇಗಾಲ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 2025-2026 ನೇ ಸಾಲಿನ ಬಹುಜನ ಸಮಾಜ ಪಕ್ಷದ ಸದಸ್ಯತ್ವ ನೊಂದಣಿ ಕಾರ್ಯಕ್ಕೆ ರಾಜ್ಯಾಧ್ಯಕ್ಷರಾದ ಡಾ.ಎಂ.ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು.
ಪಟ್ಟಣದ ಆದರ್ಶನಗರದದಲ್ಲಿರುವ ಮಹದೇವ ಮೂರ್ತಿಯವರ ನಿವಾಸದಲ್ಲಿ ಶುಕ್ರವಾರ ಚಾಮರಾಜನಗರ ಜಿಲ್ಲಾಧ್ಯಕ್ಷ ಬ.ಮ.ಕೃಷ್ಣಮೂರ್ತಿ ಅವರಿಂದ ಸದ್ಯಸತ್ವ ಪಡೆಯುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಎನ್.ನಾಗಯ್ಯ, ಜಿಲ್ಲಾ ಕಾರ್ಯದರ್ಶಿ ಕುಣಗಳ್ಳಿ ಕೆ.ಶಿವಕುಮಾರ ಯಳಂದೂರು ತಾಲ್ಲೂಕು ಸಂತೇಮರಹಳ್ಳಿ ಬ್ಲಾಕ್ ಸಮಿತಿಯ ಜಿಲ್ಲಾ ಕಾರ್ಯದರ್ಶಿ ಮಾಂಬಳ್ಳಿ ಬಿ.ಬಸವರಾಜು,
ಕೊಳ್ಳೇಗಾಲ ಕ್ಷೇತ್ರ ಅಧ್ಯಕ್ಷ ಶಂಕರ್ ಚೇತನ್, ಉಪಾಧ್ಯಕ್ಷ ಜಯಪ್ರಕಾಶ್, ತಾಲ್ಲೂಕು ಉಸ್ತುವಾರಿಗಳಾದ ರಂಗಸ್ವಾಮಿ(ರವಿ), ಯಳಂದೂರು ತಾಲ್ಲೂಕು ಅಧ್ಯಕ್ಷ ಮಲ್ಲಿಕ್ ಬಹುಜನ್, ಉಪಾಧ್ಯಕ್ಷ ಎಸ್. ನಾಗಭೂಷಣ್, ಪ್ರಧಾನ ಕಾರ್ಯದರ್ಶಿ ಎಂ. ಶಿವಶಂಕರ್, ಸಂತೇಮರಳ್ಳಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕುದೇರು ವಿಜಯಕುಮಾರ್,
ಖಜಾಂಚಿ ಪುನೀತ್ ಹಾಗೂ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು.
