ಹುಣಸೂರು: ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಅವರ ಪತ್ನಿ ವರ್ಷಾ ಹರೀಶ್ ಗೌಡ ಅವರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಕಮೆಂಟ್ ಹಾಕಿದ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಜೂನಿಯರ್ ಟೋಸ್ ಪ್ರೀ ಸ್ಕೂಲ್ ಮಾಲೀಕ ಬೆಂಗಳೂರು ವಾಸಿ ವಿಶ್ವೇಶ್ವರಯ್ಯ ಬಿನ್ ಮುದ್ದಯ್ಯ ಎಂಬಾತ ಆರೋಪಿ ಎಂದು ಗುರುತಿಸಲಾಗಿದೆ.
ಈ ಪ್ರಕರಣದಲ್ಲಿ ಅಚ್ಚರಿ ಕೂಡಾ ಮೂಡಿದೆ, ಇದಕ್ಕೆ ಆರೋಪಿ ವಿಶ್ವೇಶ್ವರಯ್ಯ ಹಿರಿಯ ಶಾಸಕ ಜಿ.ಟಿ. ದೇವೇಗೌಡರ ಅಳಿಯ ಎಂದು ತಿಳಿದುಬಂದಿದೆ.
ಈ ಕುರಿತು ವರ್ಷಾ ಹರೀಶ್ ಗೌಡ ಅವರು ಮೈಸೂರಿನ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿತ್ತು.
ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ವಿಶ್ವೇಶ್ವರಯ್ಯ ನಿಜಕ್ಕೂ ಜಿ.ಟಿ.ದೇವೇಗೌಡರ ಅಳಿಯನೆ,ಸಂಬಂಧಿಯಾಗಿಯೂ ವರ್ಷಾ ಹರೀಶ್ ಗೌಡಾಗೆ ಬ್ಯಾಡ್ ಕಾಮೆಂಟ್ ಹಾಕಿದ್ದು ಸತ್ಯವೆ,ಇಲ್ಲಾ ಬೇರೆ ಯಾರೊ ಕುತಂತ್ರದಿಂದ ಹೀಗೆ ಮಾಡಿರಬಹುದಾ ಎಂಬುದು ಪೊಲೀಸರ ತನಿಖೆಯಿಂದಷ್ಟೆ ಗೊತ್ತಾಗಬೇಕಿದೆ.
