ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ದೇಶದ ಖ್ಯಾತ ಉದ್ಯಮಿ ಅದಾನಿಯವರನ್ನು ಬಿಜೆಪಿ ಏಜೆಂಟ್ ಎಂದಿದ್ದರು ಈಗ ರಾಹುಲ್ ಅವರನ್ನ ಕೇಳಿಯೇ ಅದಾನಿಯವರನ್ನ ಬೆಂಗಳೂರಿಗೆ ಕರೆಸಿದ್ದೀರಾ ಎಂದು ಪ್ರತಿಪಕ್ಷ ನಾಯಕ ಟಾಂಗ್ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅಶೋಕ್,ಅದಾನಿಯವರನ್ನ ಬಿಜೆಪಿ ಏಜೆಂಟ್ ಅಂತ ಕಾಂಗ್ರೆಸ್ ಇತರ ನಾಯಕರು ಕೂಡಾ ಸಾರ್ವಜನಿಕ ವೇದಿಕೆಗಳಲ್ಲಿ ವಾದ ಮಂಡಿಸುತ್ತಿದ್ದರು ಈಗ ಅವರನ್ನ ಕರೆಸಿಕೊಂಡಿರುವಾಗ ಬಿಜೆಪಿ ಏಜೆಂಟ್ ಅನ್ನಿಸಲಿಲ್ಲವೆ ಎಂದು ಪ್ರಶ್ನಿಸಿದರು.
ಇದೀಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅದಾನಿ ಸಂಸ್ಥೆಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿದ್ದಾರೆ. ಅದಾನಿಯವರನ್ನು ವಿರೋಧಿಸುವ ರಾಹುಲ್ ಗಾಂಧಿ ಅವರಿಂದ ಡಿಕೆಶಿ ಇದಕ್ಕೆ ಅನುಮತಿ ಪಡೆದಿದ್ದಾರೆಯೇ ಇದು ಕಾಂಗ್ರೆಸ್ನ ಡಬಲ್ ಸ್ಟ್ಯಾಂಡರ್ಡ್ ನೀತಿ ಅಲ್ಲವೇ ಎಂದು ಅಶೋಕ ಖಾರವಾಗಿ ಪ್ರಶ್ನಿಸಿದರು.
