ಸ್ಪೇನ್ನ: ಸ್ಪೇನ್ನ ಪೂರ್ವ ಮತ್ತು ದಕ್ಷಿಣ ಪ್ರಾಂತ್ಯಗಳಲ್ಲಿ ತೀವ್ರ ವಾಯುಭಾರ ಕುಸಿತದಿಂದ ಉಂಟಾದ ಆಡಮ್ ಚಂಡಮಾರುತ ಇತಿಹಾಸದಲ್ಲೇ ಕಾಣದ ಹಠಾತ್ ಪ್ರವಾಹವನ್ನು ಸೃಷ್ಟಿಸಿದೆ.
ಆಡಮ್ ಚಂಡಮಾರುತದಿಂದಾಗಿ
ವೇಲೆನ್ಸಿಯಾ ಮತ್ತು ಅಲಿಕಾಂಟೆ ಪ್ರಾಂತ್ಯದ ಪೆಗೋ ನಗರದಲ್ಲಿ ಕೇವಲ 36 ಗಂಟೆಗಳಲ್ಲಿ 632 ಮಿಮೀ ನಷ್ಟು ದಾಖಲೆಯ ಭಾರಿ ಮಳೆ ಸುರಿದಿದೆ.
ಪ್ರವಾಹದ ತೀವ್ರತೆಯಿಂದಾಗಿ ಸುಮಾರು 145 ಪುರಸಭೆಗಳ ವ್ಯಾಪ್ತಿಯಲ್ಲಿ 8,50,000 ಕ್ಕೂ ಹೆಚ್ಚು ಜನರನ್ನು ಮನೆಯೊಳಗೇ ಇರುವಂತೆ ಸೂಚಿಸಲಾಗಿತ್ತು. ನದಿಗಳು ಉಕ್ಕಿ ಹರಿದಿದ್ದರಿಂದ ಹಲವಾರು ಜನರು ಮೃತಪಟ್ಟಿದ್ದಾರೆ.
2,100 ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹೆಲಿಕಾಪ್ಟರ್ಗಳ ಮೂಲಕ ನೂರಾರು ಜನರನ್ನು ರಕ್ಷಿಸಲಾಗಿದೆ.
ಬಲೇರಿಕ್ ದ್ವೀಪಗಳು ಮತ್ತು ಇಬಿಜಾ ವಿಮಾನ ನಿಲ್ದಾಣದಲ್ಲಿ ರನ್ವೇಗಳು ನೀರಿನಿಂದ ಆವೃತವಾಗಿದ್ದು ಜಾಗತಿಕ ವಿಮಾನ ಯಾನ ಅಸ್ತವ್ಯಸ್ತಗೊಂಡಿದೆ.
