ಮೈಸೂರು: ಬಿ ಇ ಕಂಪ್ಯೂಟರ್ ಸೈನ್ಸ್ ವಿಭಾಗದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದ
ಪ್ರೇಕ್ಷ ಎನ್ ಆರ್.ಅವರನ್ನು ಜೆಡಿಎಸ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಪ್ರೇಕ್ಷ ಎನ್ ಆರ್.ಅವರು,
ಮೈಸೂರಿನ ಜಯಚಾಮರಾಜೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲೇಜಿನ 2023, 24,25, 26 ನೇ ಶೈಕ್ಷಣಿಕ ಸಾಲುಗಳಲ್ಲಿ ಅಂತಿಮ ಬಿ ಇ ಕಂಪ್ಯೂಟರ್ ಸೈನ್ಸ್ ವಿಭಾಗದ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಅವರು ಜನತಾದಳ ಜಾತ್ಯತೀತ ರಾಜ್ಯ ವಕ್ತಾರ ಹಾಗೂ ಅರಣ್ಯ ವಸತಿ ವಿಹಾರ ಧಾಮ ಮಾಜಿ ನಿರ್ದೇಶಕರಾದ ಎನ್ ಆರ್ ರವಿಚಂದ್ರ ಗೌಡರ ಪುತ್ರಿ.
ಜನತಾದಳ ಜಾತ್ಯತೀತ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಮಂಜುನಾಥ್ ನೇತೃತ್ವದಲ್ಲಿ ಪ್ರೇಕ್ಷಾ ಅವರನ್ನು ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮೈಸೂರು ನಗರ ಜೆಡಿಎಸ್ ನ ಹಿರಿಯ ಉಪಾಧ್ಯಕ್ಷರಾದ ಫಾಲ್ಕನ್ ಬೋರೇಗೌಡ, ಹಿರಿಯ ಮುಖಂಡರುಗಳಾದ ಕೃಷ್ಣಪ್ಪ, ಎಸ್ ಪ್ರಕಾಶ್ ಪ್ರಿಯ ದರ್ಶನ್, ನಂಜನಗೂಡು ತಾಲೂಕು ಅಧ್ಯಕ್ಷ ರಾಜಶೇಖರ್ ಪಿ ಎಸ್, ಚಾಮರಾಜ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ್, ಕೃಷ್ಣರಾಜ ಕ್ಷೇತ್ರದ ಅಧ್ಯಕ್ಷ ರಘುರಾಮ್, ನರಸಿಂಹರಾಜ ಕ್ಷೇತ್ರದ ಅಧ್ಯಕ್ಷ ರಿಜ್ವಾನ್ ತರರು ಹಾಜರಿದ್ದರು
ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ಮಂಜುನಾಥ್ ಮತ್ತಿತರರು ಪ್ರೇಕ್ಷ. ಎನ್ ಆರ್ ಅವರ ಶೈಕ್ಷಣಿಕ ಸಾಧನೆಗೆ ಹೃತ್ಪೂರ್ವಕವಾಗಿ ಅಭಿನಂದಿಸಿ ಮುಂದಿನ ಶೈಕ್ಷಣಿಕ ಜೀವನವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.
