ಮೈಸೂರು: ಮೈಸೂರಿನ ಸರಸ್ವತಿಪುರಂ ನಲ್ಲಿರುವ ಶ್ರೀ ಕೃಷ್ಣದಾಮದಲ್ಲಿ
ಸ ರಿ ಗ ಮ ಪ ಖ್ಯಾತಿಯ ಗುರುಗಳಾದ ಡಾ. ಸುಚೇತನ್ ರಂಗಸ್ವಾಮಿ ಮತ್ತು ಅವರ ಶಿಷ್ಯ ಶ್ರೀನಿಧಿ ಶಾಸ್ತ್ರಿ ಇವರಿಂದ ಭಕ್ತಿ ಭಾವ ಸಿಂಚನ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಶ್ರೀ ಕೃಷ್ಣ ಟ್ರಸ್ಟ್ ಹಾಗೂ ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಚಾತುರ್ಮಾಸ್ಯ ಸಮಿತಿ
ವತಿಯಿಂದ ಉಡುಪಿ ಶ್ರೀ ಕಾಣಿಯೂರು ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರ 35ನೇ ಚಾತುರ್ಮಾಸ್ಯ ಅಂಗವಾಗಿ ಡಾ. ಸುಚೇತನ್ ರಂಗಸ್ವಾಮಿ ಮತ್ತು ಅವರ ಶಿಷ್ಯ ಶ್ರೀನಿಧಿ ಶಾಸ್ತ್ರಿ ಅವರಿಂದ ಭಕ್ತಿ ಭಾವ ಸಿಂಚನ ಕಾರ್ಯಕ್ರಮಪ ಗುರುವಾರ ಸಂಜೆ 7 ಗಂಟೆಗೆ ಜರುಗಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕೆಂದು ಪ್ರಕಟಣೆಯ ಮೂಲಕ ಶ್ರೀ ಕೃಷ್ಣ ಟ್ರಸ್ಟ್ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ರವಿಶಾಸ್ತ್ರಿ ತಿಳಿಸಿದ್ದಾರೆ.
