ಮೈಸೂರು: ಆದಿಚುಂಚನಗಿರಿ ಒಕ್ಕಲಿಗ ಮಹಿಳಾ ಸಮಾಜ ಕುವೆಂಪು ನಗರ ಮೈಸೂರು ವತಿಯಿಂದ ವಿಹಾನ್ ಹೆರಿಟೇಜ್ ಹಾಲ್ ನಲ್ಲಿ ಹಾಸ್ಯ ಕಡಲು ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಕರ್ನಾಟಕ ಹಾಸ್ಯರತ್ನ ಪ್ರಶಸ್ತಿ ಪುರಸ್ಕೃತರೂ ಜೂನಿಯರ್ ಪ್ರಾಣೇಶ್ ಖ್ಯಾತರಾದ ಬೆಮೆಲ್ ಕಂಪಲಪ್ಪ ನವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾಕ್ಟರ್ ಹೇಮಾನಂದೀಶ್ ಅವರು ಮಾತನಾಡಿ, ನಾವು ಎಲ್ಲೇ ಇದ್ದರೂ ನಮ್ಮ ಬೇರುಗಳು ಎಲ್ಲಾ ಕಡೆ ಹರಡಬೇಕು, ಒಕ್ಕಲಿಗರು ಒಗ್ಗಟ್ಟಾಗಿ ಬೇರೂರ ಬೇಕು ಸಂಘ ಯಾವುದಾದರೇನು ಸಂಘಟನೆ ಮುಖ್ಯ ಎಂದು ಹೇಳಿದರು.
ಸಂಘದ ಅಧ್ಯಕ್ಷೆ ಸವಿತಾ ಗೌಡ ಅವರು ಮಾತನಾಡಿ ಹಾಸ್ಯ ಪ್ರವೃತ್ತಿಯನ್ನು ರೂಡಿಸಿಕೊಂಡರೆ ಆಯುಸ್ಸಿನ ಜೊತೆಗೆ ಸೌಂದರ್ಯವು ವೃದ್ಧಿಯಾಗುತ್ತದೆ ಎಂದು ವ್ಯಾಖ್ಯಾನಿಸಿದರು.
ಸಭೆಯಲ್ಲಿ ಇತರೆ ಒಕ್ಕಲಿಗ ಸಂಘದ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು ಅಲ್ಲದೆ ಮುಂಬರುವ ಒಕ್ಕಲಿಗ ಸಂಘದ ಚುನಾವಣೆಯಲ್ಲಿ ಸ್ಪರ್ಧೆಯ ಆಕಾಂಕ್ಷಿ ಯಾದ ಯಾಚೆನಹಳ್ಳಿ ಹೇಮಂತ್ ಕುಮಾರ್ ವರನ್ನು ಇದೇ ವೇಳೆ ಗೌರವಿಸಲಾಯಿತು.
ಪದಾಧಿಕಾರಿಗಳಾದ ಲೀಲಾ ಗಂಗಾಧರ್ ಸುವರ್ಣ ಗಣೇಶ, ವಿಜಯ ಮಂಜುನಾಥ್, ಲತಾ ರಮೇಶ, ಗೀತಾ ಕುಮಾರ್, ಶಶಿ ಉದಯಕುಮಾರ್, ಮಂಗಳ ಮಂಜುನಾಥ್, ಶೋಭಾ ಮತ್ತಿತರರು ಉಪಸ್ಥಿತರಿದ್ದರು.
ಇತರೆ ಒಕ್ಕಲಿಗ ಸಂಘದ ಅಧ್ಯಕ್ಷರುಗಳಾದ ಸುವರ್ಣ ರಾಜ್, ಸವಿತಾ, ದೇವತಿ ಕೃಷ್ಣಪ್ಪ ಮತ್ತು ಸಣ್ಣಲಿಂಗೇಗೌಡ ಅವರು ಪಾಲ್ಗೊಂಡಿದ್ದರು.
