ಕುಣಿಗಲ್: ಕುಣಿಗಲ್ ತಾಲೂಕು ಹುಲಿಯೂರು ದುರ್ಗದಲ್ಲಿ
ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು ರೈತಮುಖಂಡರೊಂದಿಗೆ ಸಭೆ ನಡೆಸಿ ಅಹವಾಲುಗಳನ್ನು ಆಲಿಸಿದರು.
ಇಂದು ನಡೆದ ಸಭೆಯಲ್ಲಿ ರೈತರ ಪರವಾಗಿ ಕೆಲಸ ಮಾಡುವಂತೆ ರಾಜ್ಯ ಸರ್ಕಾರವನ್ನು ರೈತ ಮುಖಂಡರು ಒತ್ತಾಯಿಸಿದರು.
ರಾಜ್ಯದಾದ್ಯಂತ ಏಕರೂಪ ಶಿಕ್ಷಣ ಜಾರಿ ಮಾಡುವಂತೆ ಒತ್ತಾಯಿಸಲಾಯಿತು,ಅಲ್ಲದೆ ಕಬ್ಬು ಮತ್ತು ಕಟಾವು ಸಾಗಾಣಿಕೆ ವೆಚ್ಚವನ್ನು ನೀಡುವಂತೆ ಮೈಸೂರು ಪ್ರಾಂತ್ಯದ ಎಲ್ಲ ಕಾರ್ಖಾನೆ ಗಳಿಗೆ ಆದೇಶ ನೀಡಬೇಕೆಂದು ರೈತರು ಆಗ್ರಹಿಸಿದರು.
ಬರಗಾಲ ಪೀಡಿತ ಪ್ರದೇಶ ತಾಲೂಕುಗಳ ಜಮೀನುಗಳಿಗೆ ಭೇಟಿ ನೀಡಬೇಕು,ರೈತರೊಬ್ಬರಿಗೆ ಒಂದು ಎಕರೆಗೆ ಒಂದು ಲಕ್ಷ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಮುಖಾಂತರ ಒತ್ತಾಯಿಸಲಾಯಿತು.
ಸಭೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಜಿಲ್ಲಾ ಅಧ್ಯಕ್ಷ ಬನ್ನೂರು ನಾರಾಯಣ್, ಶೋಷಿ ಪ್ರಕಾಶ್, ಪ್ರಭುಲಿಂಗು, ಯೋಗೇಶ್, ಶಿವರಾಮು, ಮಾದೇಗೌಡರು, ನಾಗರತ್ನ ಸೇರಿದಂತೆ ಅನೇಕ ರೈತ ಮುಖಂಡರು ಪಾಲ್ಗೊಂಡಿದ್ದರು.
