ಮೈಸೂರು: ಬರಗಾಲದಲ್ಲಿ ರೈತರು ಸಂಕಷ್ಟದಲ್ಲಿದ್ದು ರೈತರ ಸಾಲ ಮನ್ನಾ ಮಾಡಬೇಕೆಂದು ಕಾಯಕ ಸಮಾಜದ ರಾಜ್ಯಾಧ್ಯಕ್ಷ ಕೆ ಸಿ ಪುಟ್ಟ ಸಿದ್ದ ಶೆಟ್ಟರು ಮನವಿ ಮಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನುಡಿದಂತೆ ನಡೆದಿದ್ದಾರೆ, ಅವರು ಅಧಿಕಾರವನ್ನು ಹಸ್ತಾಂತರ ಮಾಡಿ ನೂರು ದಿನಗಳಾಗಿವೆ ಇದು ಶ್ಲಾಘನೀಯ ಬೆಳವಣಿಗೆ ಎಂದು ಪುಟ್ಟ ಸಿದ್ದ ಶೆಟ್ಟರು ಹೇಳಿದರು.
ಮೈಸೂರಿನ ಜನದರ್ಶನಿ ಯಲ್ಲಿ ಕಾಯಕ ಸಮಾಜ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡಿದರು.
ಈಗಿನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ನೂರು ದಿನ ಪೂರೈಸಿದ್ದಾರೆ, ಅವರು ರಾಜ್ಯದಲ್ಲಿ ಕಾರ್ಯಗಳನ್ನು ಮಾಡಿಕೊಂಡು ನೂರು ದಿನದ ಸಂಭ್ರಮದಲ್ಲಿ ವಿನೂತನ ಕಾರ್ಯಕ್ರಮಗಳನ್ನು ಜಾರಿ ಮಾಡುತ್ತಿದ್ದಾರೆ ಇದು ಸಂತಸ ಎಂದು ಹೇಳಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ವರದಿಯನ್ನು ಜಾರಿಗೊಳಿಸಿದ್ದಾರೆ ಇದು ನಮಗೂ ಖುಷಿ ತಂದಿದೆ,ಆದರೆ ರಾಜ್ಯದ ರೈತರು ಬರಗಾಲ ಎದುರಿಸುತ್ತಿದ್ದು ರಾಜ್ಯದ ಅಂತರ್ಜಲ ಕುಸಿಯುತ್ತಿದೆ ರೈತ ಸಂಕಟಕ್ಕೆ ಸಿಲುಕಿದ್ದು ರೈತರ ಸಾಲ ಮನ್ನಾ ಮಾಡಿ ರೈತರಿಗೆ ಪರಿಹಾರ ಕೊಡಿಸಿ ಕೊಡಿ ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ಮಹೇಶ್ ,ಮುಳ್ಳೂರ್ ರಮೇಶ್, ಶಿವರಾಜು ಕೊಣಸೂರು, ಮಾದೇವ ಗಾಣಿಗ, ಕೆಂಪು ಶೆಟ್ಟಿ, ಕುಮಾರ್, ನಂಜಪ್ಪ ಇನ್ನಿತರರು ಭಾಗಿಯಾಗಿದ್ದರು.
