ಬನ್ನೂರು: ಬನ್ನೂರಿನ ಬಣ್ಣಾರಿಯಮ್ಮ ಸಕ್ಕರೆ ಕಾರ್ಖಾನೆ ಉಪ ಕಚೇರಿಯ ಮುಂದೆ ಕಬ್ಬು ಬೆಳೆಗಾರರ ಜೊತೆ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಬನ್ನೂರ್ ನಾರಾಯಣ ನೇತೃತ್ವದಲ್ಲಿ ಕಾರ್ಖಾನೆ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.
ಸರಿಯಾದ ಸಮಯಕ್ಕೆ ಕಬ್ಬು ಬೆಳೆದ ರೈತರಿಂದ ಕಾರ್ಖಾನೆ ವ್ಯವಸ್ಥಾಪಕರು ಕಟಾವು ಮಾಡಿಸದೆ ವಿಳಂಬ ಮಾಡುತ್ತಿರುವುದರಿಂದ ಕಬ್ಬಿನ ಕೂಲಿ ಹೆಚ್ಚಾಗಿ ಕಬ್ಬು ಇಳುವರಿ ನಷ್ಟವಾಗುತ್ತಿದೆ ಇದರಿಂದ ರೈತರಿಗೆ ಒಂದು ಎಕರೆಗೆ ಕನಿಷ್ಠ 25000 ನಷ್ಟ ಆಗುತ್ತದೆ ಸರಿಯಾದ ಸಮಯದಲ್ಲಿ ಎರಡನೇ ಬೆಳೆ ಕುಂಠಿತವಾಗುತ್ತದೆ ಕೂಡಲೇ ಸರ್ಕಾರ ಹಾಗು ಜಿಲ್ಲಾಡಳಿತ ಸರಿಯಾದ ಸಮಯಕ್ಕೆ ಕಬ್ಬು ಕಟಾವ್ ಮಾಡಿಸಬೇಕು ಎಂದು ಈ ವೇಳೆ ಬನ್ನೂರು ನಾರಾಯಣ್ ಆಗ್ರಹಿಸಿದರು.
ಇಳುವರಿ ನಷ್ಟವನ್ನು ಕಾರ್ಖಾನೆ ಮಾಲೀಕರೇ ಭರಿಸಬೇಕು, ಕೂಲಿ 500 ರೂ ಗಳಿಂದ ಒಂದು ತನಗೆ ಹೆಚ್ಚಾದರೆ ಮೇಲೆ ಬರುವ ಹೆಚ್ಚುವರಿ ಕೂಲಿಯನ್ನು ಕಾರ್ಖಾನೆ ಮಾಲೀಕರೇ ಭರಿಸಬೇಕು ಮತ್ತು ಉಪ ಕಚೇರಿ ಎಂದು ಅಧಿಕೃತ ನಾಮಫಲಕ ಹಾಕಿಸಬೇಕೆಂದು ಒತ್ತಾಯಿಸಿದರು.
ನಂತರ ಕಾರ್ಖಾನೆಯ ಬನ್ನೂರು ಶಾಖೆಯ ಸೂಪರ್ವೈಸರ್ ಕೆಂಪೇಗೌಡರಿಗೆ ಮನವಿ ಸಲ್ಲಿಸಲಾಯಿತು.
ನಮ್ಮ ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲದಿದ್ದಲ್ಲಿ ಕಾರ್ಖಾನೆ ಕಚೇರಿಗೆ ಬೀಗ ಜಡಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ರಾಯಚೂರು ಜಿಲ್ಲಾಧ್ಯಕ್ಷರು ರೈತ ಸಂಘ ಮೂಲ ಸಂಘಟನೆ ಬೆಟ್ಟಳ್ಳಿ ಶಿವರಾಮ್, ಕೃಷ್ಣ, ವಿಶ್ವನಾಥ್, ಮಲ್ಲೇಶ್, ನಾಗರಾಜು, ರಾಜು, ರಮೇಶ್, ನಿಂಗೇಗೌಡ,ಕಾಳೇಗೌಡ, ಪುಟ್ಟಸ್ವಾಮಿ, ರಂಗಸ್ವಾಮಿ ಸೇರಿದಂತೆ ಅನೇಕ ಕಬ್ಬು ಬೆಳೆಗಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
