ಮೈಸೂರು: ಮೈಸೂರಿನ ಸರಸ್ವತಿಪುರಂ ನಲ್ಲಿರುವ ಶ್ರೀ ಕೃಷ್ಣದಾಮದಲ್ಲಿ ನಾಳೆ ವಿದುಷಿ ಸುಮನ ಶ್ರೀಕಾಂತ್ ಮತ್ತು ತಂಡದವರಿಂದ ದಾಸಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀ ಕೃಷ್ಣ ಟ್ರಸ್ಟ್, ಶ್ರೀ ಕೃಷ್ಣ ಮಿತ್ರ ಮಂಡಳಿ ಹಾಗೂ ಚಾತುರ್ಮಾಸ್ಯ ಸಮಿತಿ
ವತಿಯಿಂದ ಉಡುಪಿ ಕಾಣಿಯೂರು ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದಂಗಳವರ 35ನೇ ಚಾತುರ್ಮಾಸ್ಯ ಅಂಗವಾಗಿ ವಿದುಷಿ ಸುಮನ ಶ್ರೀಕಾಂತ್ ಮತ್ತು ತಂಡದವರಿಂದ ದಾಸಂಜಲಿ ಕಾರ್ಯಕ್ರಮವು ಶ್ರೀ ಕೃಷ್ಣದಾಮದಲ್ಲಿ ಆಗಸ್ಟ್ 29ರ ಶನಿವಾರ ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಪ್ರಕಟಣೆಯ ಮೂಲಕ ಶ್ರೀ ಕೃಷ್ಣ ಟ್ರಸ್ಟ್ ಉಪಾಧ್ಯಕ್ಷರು ಹಾಗೂ ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷರಾದ ರವಿಶಾಸ್ತ್ರಿ ಮನವಿ ಮಾಡಿದ್ದಾರೆ.
