ಮೈಸೂರು: ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಪ್ರೀತಿ, ನಂಬಿಕೆ ಮತ್ತು ರಕ್ಷಣೆಯ ಬಾಂಧವ್ಯವನ್ನು ಸಾರುವ ಪವಿತ್ರ ಹಬ್ಬ ಎಂದು ಬಿಜೆಪಿ ಮೈಸೂರು ನಗರ ಮಹಿಳಾ ಮೋರ್ಚಾ ಅಧ್ಯಕ್ಷೆ ಮೋನಿಕಾ ಎಂ ತಿಳಿಸಿದರು.
ಮೈಸೂರು ಮಹಾನಗರ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಹೂಟಗಳ್ಳಿ ಕೆಎಚ್ಬಿ ಕಾಲೋನಿಯ ಸುದರ್ಶನ ವಿದ್ಯಾ ಸಂಸ್ಥೆಯಲ್ಲಿ ಶಿಕ್ಷಕ ವೃಂದದ ಜತೆ ಪವಿತ್ರ ರಕ್ಷಾ ಬಂಧನವನ್ನ ರಕ್ಷೆ ಕಟ್ಟುವ ಮೂಲಕ ಆಚರಣೆ ಮಾಡಿದ ವೇಳೆ ಅವರು ಮಾತನಾಡಿದರು.
ಈ ದಿನ ಸಹೋದರಿ ಸಹೋದರನ ಕೈಗೆ ರಾಖಿ ಕಟ್ಟಿ ಅವನ ಸುಖ, ಶಾಂತಿ ಮತ್ತು ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ. ಸಹೋದರನು ತನ್ನ ಸಹೋದರಿಯನ್ನು ಸದಾ ರಕ್ಷಿಸುವ ಭರವಸೆಯನ್ನು ನೀಡುತ್ತಾನೆ.
ರಾಖಿಯ ಈ ಪವಿತ್ರ ದಾರವು ಕೇವಲ ಒಂದು ಆಚರಣೆಯಲ್ಲ, ಪರಸ್ಪರ ಗೌರವ, ಕಾಳಜಿ ಮತ್ತು ಜವಾಬ್ದಾರಿಯ ಸಂಕೇತವಾಗಿದೆ. ರಕ್ಷಾ ಬಂಧನವು ಕುಟುಂಬ ಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಿ, ಪ್ರೀತಿ ಮತ್ತು ಸೌಹಾರ್ದತೆಯ ಸಂದೇಶವನ್ನು ಸಮಾಜಕ್ಕೆ ಸಾರುತ್ತದೆ ಎಂದು ಹೇಳಿದರು
ಈ ಹಬ್ಬದ ವೇಳೆ ಸುದರ್ಶನ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಸುರೇಶ್ ಕುಮಾರ್, ವಿನುತಾ ಮುಖ್ಯೋಪಾಧ್ಯಾಯನಿ
ಪ್ರವೀಣ್ ಎಂ ಜಿ, ಜಿಲ್ಲಾ ಮಹಿಳಾ ಮೋರ್ಚ ಪ್ರಧಾನ ಕಾರ್ಯದರ್ಶಿ ರಶ್ಮಿ, ಖಜಾಂಚಿ ಗೀತಾ, ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ, ವತ್ಸಲಾ , ಮಣಿಯಮ್ಮ, ಸುಧಾಮಣಿ ಹಾಜರಿದ್ದರು.
