ಮೈಸೂರು: ಮೈಸೂರಿನ ಕೆ.ಆರ್.ಎಸ್. ರಸ್ತೆಯ ಸಿ.ಎಫ್.ಟಿ.ಆರ್.ಐ. ಸಮೀಪ ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ ಪುರಾತನ ಪ್ರಾಣದೇವರ ದೇವಸ್ಥಾನದಲ್ಲಿ ಆಷಾಢ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು.
ಗಯಾಕ್ಷೇತ್ರದ ನಂತರ ದರ್ಶನ ಮಾಡಬಹುದಾದ ಅಪರೂಪದ ಗಯಾ ಗದಾಧರ ಮೂರ್ತಿಯು ಭಕ್ತರಿಗೆ ದರ್ಶನ ನೀಡುತ್ತದೆ. ಬಿಹಾರದ ಗಯಾದಲ್ಲಿ ಪಿತೃಕಾರ್ಯಗಳನ್ನು ನೆರವೇರಿಸಿದಷ್ಟೇ ಪುಣ್ಯವು ಇಲ್ಲಿ ವಿಧಿವತ್ತಾಗಿ ಆಚರಿಸಿದರೂ ದೊರೆಯುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ.
ಇಂದು ಆಷಾಢ ಅಮಾವಾಸ್ಯೆ ಪ್ರಯುಕ್ತ ವಿಶೇಷ ಅಭಿಷೇಕ ಹಾಗೂ ಪೂಜೆಯನ್ನು ಭಕ್ತಿಯಿಂದ ನೆರವೇರಿಸಲಾಯಿತು. ಲೋಕಕ್ಷೇಮ, ಶಾಂತಿ ಹಾಗೂ ಸಮಸ್ತ ಜನರ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಪಿತೃಪಕ್ಷದ ಸಂದರ್ಭದಲ್ಲಿ ಪಿತೃತರ್ಪಣ ಹಾಗೂ ಶ್ರಾದ್ಧ ಸಂಬಂಧಿತ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಈ ದೇವಸ್ಥಾನವು ಅತ್ಯಂತ ಪವಿತ್ರ ಮತ್ತು ಯೋಗ್ಯ ಕ್ಷೇತ್ರವಾಗಿದೆ.
ಈ ಸಂದರ್ಭದಲ್ಲಿ ಕೆ. ಮಹೇಶ್ ಕಾಮತ್, ವಿಕ್ರಮ್ ಐಯಂಗಾರ, ವಾಸುದೇವ ಮೂರ್ತಿ, ಕೆ. ಭುಜಂಗ ರಾವ್ ಹಾಗೂ ಪ್ರಮೋದ ಆಚಾರ್ ಉಪಸ್ಥಿತರಿದ್ದರು.
ವಿಶೇಷ ಅಭಿಷೇಕ ಹಾಗೂ ಪೂಜಾ ಕೈಂಕರ್ಯವನ್ನು ಶ್ರೀ ನಾಗಭೂಷಣ ಆಚಾರ್ಯ ಹಾಗೂ ಶ್ರೀ ಗುರುರಾವ್ ಅವರು ವಿಧಿವತ್ತಾಗಿ ನೆರವೇರಿಸಿದರು.
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಪ್ರಾಣದೇವರು, ನವಗ್ರಹ ದೇವತೆಗಳು, ಶ್ರೀ ಗಣೇಶ, ಅಶ್ವತ್ಥ ಕಟ್ಟೆ ಹಾಗೂ ಶ್ರೀ ಗಯಾ ಗದಾಧರರ ದಿವ್ಯ ದರ್ಶನ ಪಡೆದು ಅವರ ಕೃಪಾಶೀರ್ವಾದಕ್ಕೆ ಪಾತ್ರರಾಗುವಂತೆ ವಿನಂತಿಸಿಕೊಳ್ಳಲಾಗಿದೆ.
