ಮೈಸೂರು: ಸಮಾಜದ ಒಳಿತಿಗೆ ತಮ್ಮ ಸೇವೆ ಮುಡಿಪಾಗಿಟ್ಟು ಸಾವಿರಾರು ಜನರ ಆರೋಗ್ಯ ಕಾಪಾಡುವ ವೈದ್ಯರು ನಡೆದಾಡುವ ದೇವರಿದ್ದಂತೆ ಎಂದು ಸಮಾಜ ಸೇವಕರಾದ ವಿಜಯಲಕ್ಷ್ಮಿ ಅಯ್ಯಂಗಾರ್
ತಿಳಿಸಿದರು.
ವೈದ್ಯರ ದಿನಾಚರಣೆ ಪ್ರಯುಕ್ತ
ಕೆ ಎಂ ಪಿ ಕೆ ಟ್ರಸ್ಟ್ ವತಿಯಿಂದ ಜಯನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಲೇಖನಿ ಸಾಮಗ್ರಿಗಳನ್ನು ವಿತರಿಸಿ ಅವರು ಮಾತನಾಡಿದರು.
ವೈದ್ಯರ ಸೇವೆ ಅವಿಸ್ಮರಣೆಯ, ಆಧುನಿಕ ಜೀವನ ಪದ್ಧತಿಯಲ್ಲಿ ಎಲ್ಲರೂ ಒತ್ತಡಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು
ವೈದ್ಯರಾದ ಡಾ. ರೇಖಾ ಅರುಣ್ ಅವರು ಮಾತನಾಡಿ,ಭಾರತ ರತ್ನ ಡಾ.ಬಿದನ್ ಚಂದ್ರ ರಾಯ್ ಅವರು ಹುಟ್ಟಿದ ದಿನದಂದು ವೈದ್ಯರ ದಿನಾಚರಣೆ ಆಚರಿಸುತ್ತೇವೆ. ಪ್ರತಿಯೊಬ್ಬ ವೈದ್ಯರಿಗೂ ಡಾ. ಬಿದನ್ ಚಂದ್ರ ರಾಯ್ ಅವರ ಸೇವಾ ಕೊಡುಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಪಶ್ಚಿಮ ಬಂಗಾಳದ 2ನೇ ಮುಖ್ಯಮಾಂತ್ರಿಯಾಗಿಯೂ ಸಹ ಸೇವೆ ಸಲ್ಲಿ ಸಿ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆಗೆ ಕಾರಣರಾದರು, ಮನುಷ್ಯ ತನ್ನ ಜೀವನದಲ್ಲಿ ಏನಾದರೂ ಸಂಪಾದಿಸಬೇಕು ಎಂದರೆ ಉತ್ತಮ ಆರೋಗ್ಯವಿದ್ದರೆ ಮಾತ್ರ ಸಾಧ್ಯ ಅದಕ್ಕಾಗಿಯೇ ಆರೋಗ್ಯವೇ ಭಾಗ್ಯ ಎಂದು ಋಷಿಮುನಿಗಳು ಹೇಳಿದ್ದರು ಎಂದರು.
ಈ ಸಂದರ್ಭದಲ್ಲಿ ಕೆ ಆರ್ ಬ್ಯಾಂಕ್ ಅಧ್ಯಕ್ಷರಾದ ಬಸವರಾಜ್ ಬಸಪ್ಪ,ಎಸ್ ಎನ್ ರಾಜೇಶ್, ಗಾಯಕ ಗುರುರಾಜ್,ಕೆ ಎಂ ಪಿ ಕೆ ಟ್ರಸ್ಟ್ ಉಪಾಧ್ಯಕ್ಷ ರಾಕೇಶ್,ಮುಖ್ಯ ಶಿಕ್ಷಕರಾದ ಶಿವಕುಮಾರ್ ಹಾಗೂ ಸಹ ಶಿಕ್ಷಕರಾದ ಸುಜ್ಞಾನಮೂರ್ತಿ,ಎಲ್ ಕೆ ಜಿ,ಯುಕೆಜಿ ಶಿಕ್ಷಕಿಯರಾದ ಆಶಾರಾಣಿ ಹಾಗೂ ಚೈತ್ರಾ ಮತ್ತಿತರರು ಹಾಜರಿದ್ದರು.
