ಯಳಂದೂರು: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿಶೇಷವಾಗಿ ಆಚರಿಸಲಾಯಿತು.
ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು.
ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಹೂಮಳೆ ಸುರಿಸುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು. ಶಿಕ್ಷಕಿಯರು ವಿದ್ಯಾರ್ಥಿಗಳಿಗೆ ಸಿಹಿ ಹಂಚಿ
ಶಾಲೆ ಆವರಣದಲ್ಲಿ ಸಂಭ್ರಮ ಮನೆಮಾಡಿತ್ತು.
ಇದೇ ವೇಳೆ ಪೋಷಕರ ವಿಶೇಷ ಸಭೆಯನ್ನು ಹಮ್ಮಿಕೊಂಡು ಪೋಷಕರಿಗೆ ಅಗತ್ಯ ಸಲಹೆ
ನೀಡಲಾಯಿತು.
ನಂತರ ನಂತರ ಶಾಲಾ ಅವರಣದಿಂದ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ತೆರಳಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸುವಂತೆ ಪೋಷಕರಲ್ಲಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ, ಕರ್ನಾಟಕ ಪಬ್ಲಿಕ್ ಶಾಲೆ, ಉಪ ಪ್ರಾಂಶುಪಾಲರಾದ ಆರ್ ನಂಜುಂಡಯ್ಯ, ಮುಖ್ಯ ಶಿಕ್ಷಕಿ ಪುಟ್ಟ ಸಿದ್ದಮ್ಮ, ಎಸ್ ಡಿ ಎಂ ಸಿ ಅಧ್ಯಕ್ಷರಾದ ಜೈಗುರು, ಎಸ್ ಡಿ ಎಂ ಸಿ. ಸದಸ್ಯರಾದ ಕುಮಾರ್, ಚಂದ್ರಶೇಖರ್ ಶೋಭಾ, ಶಿಕ್ಷಕರಾದ ತ್ರಿವೇಣಿ, ಮಹೇಶ್, ಪುಟ್ಟಸ್ವಾಮಿ, ಆಶಾ, ಮಂಜುಳಾ, ಗೀತಾ, ಸುಭಾಷಿನಿ, ಕೀರ್ತನ, ಮಹದೇವಸ್ವಾಮಿ, ಮಾದೇಶ್, ಶ್ರೀಧರ್ ನಾಯಕ್, ಸುಧಾ , ಸವಿತಾ, ಶೋಭಾ, ವಿಜಯ, ಕುಮುದ, ಮೌನ, ಉಷಾ, ಸೌಭಾಗ್ಯ ಮತ್ತು ಅಡಿಗೆ ಸಿಬ್ಬಂದಿ ಹಾಜರಿದ್ದರು.
