ಇಸ್ಲಾಮಾಬಾದ್: ಭಾರತಕ್ಕೆ ಬೇಕಿದ್ದ ಮತ್ತೊಬ್ಬ ಉಗ್ರ ಪಾಕಿಸ್ತಾನದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ.
ಜೈಶ್-ಎ-ಮೊಹಮ್ಮದ್ (ಜೆಇಎಂ) ಉನ್ನತ ಭಯೋತ್ಪಾದಕ ಕಮಾಂಡರ್ ಮೌಲಾನಾ ಸಲ್ಮಾನ್ ಅಜರ್ ಬಹಾವಲ್ಪುರದಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ ಎಂದು ಗೊತ್ತಾಗಿದೆ.
ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದ ಜೈಶ್-ಎ-ಮೊಹಮ್ಮದ್ ನ ಪ್ರಮುಖ ಕಮಾಂಡರ್ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ.
ಪಾಕಿಸ್ತಾನವು ಭಾರತ ಮತ್ತು ಪ್ರಪಂಚದಾದ್ಯಂತ ಮೋಸ್ಟ್ ವಾಂಟೆಡ್ ಭಯೋತ್ಪಾದಕರಿಗೆ ನೆಲೆಯಾಗಿದೆ,ಆದರೂ ಯಾಕೊ ಏನೊ ಭಯೋತ್ಪಾದಕರು ಒಬ್ಬೊಬ್ಬರಾಗಿ ಪಾಕಿಸ್ತಾನದಲ್ಲೇ ಸಾವನ್ನಪ್ಪುತ್ತಿದ್ದಾರೆ.ಹಾಗಾಗಿ ಉಗ್ರರು ಅಲ್ಲಿ ಭಯದಿಂದ ಬದುಕುವಂತಾಗಿದೆ.
