ಮೈಸೂರು: ಏಪ್ರಿಲ್ 30 ರಿಂದ ದ್ವಿತೀಯ ಪಿಯುಸಿ ಪರೀಕ್ಷೆ-2 ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಜಿಲ್ಲೆಯ 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುವ ಕಾರಣ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಮತ್ತಿತರ ಅಧಿಕಾರಿಗಳು ಪೂರ್ವಭಾವಿ ಸಭೆ ಹಮ್ಮಿಕೊಂಡಿದ್ದರು.
ಪ್ರಶ್ನೆ ಪತ್ರಿಕೆ ವಿತರಣೆಯ ತ್ರಿ ಸದಸ್ಯರ, ಪೊಲೀಸ್ ಇಲಾಖೆ ,ಖಜಾನೆ ಇಲಾಖೆ, ಆರೋಗ್ಯ ಇಲಾಖೆ, ಅಂಚೆ ಕಚೇರಿ ಇಲಾಖೆಗಳ ಮುಖ್ಯಸ್ಥರ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳವರ ಅಧ್ಯಕ್ಷತೆಯಲ್ಲಿ ನಡೆಯಿತು
ಈ ಸಂದರ್ಭದಲ್ಲಿ ಹಿರಿಯ ದರ್ಜೆಯ ಕೆಎಎಸ್ ಅಧಿಕಾರಿ ಆರ್. ಐಶ್ವರ್ಯ ಅವರು ಮೈಸೂರಿನ ಹೊಸ ಹೆಚ್ಚುವರಿ ಜಿಲ್ಲಾಧಿಕಾರಿ (ಎಡಿಸಿ)ಯಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಮೈಸೂರಿನ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪ ನಿರ್ದೇಶಕರಾದ ಎಂ.ಪಿ. ನಾಗಮ್ಮ ಅವರು ಶುಭ ಹಾರೈಸಿದರು.
