ಯಾದಗಿರಿ: ಬೇಸಿಗೆ ರಜೆ ಬಂದಾಗ ಮಕ್ಕಳನ್ನು ಪೋಷಕರು ಅತೀ ಜಾಗರೂಕತೆಯಿಂದ ನೋಡಿಕೊಳ್ಳಬೇಕು,ಇಲ್ಲದಿದ್ದರೆ ಏನಾದರೂ ಒಂದು ಅನಾಹುತ ಕಟ್ಟಿಟ್ಟ ಬುತ್ತಿ.ಇದಕ್ಕೆ ಯಾದಗಿರಿಯಲ್ಲಿ ನಡೆದ ದುರಂತ ಉದಾಹರಣೆಯಾಗಿದೆ.
ಬೇಸಿಗೆ ರಜೆ,ಸುಡು ಬಿಸಿಲು ತಂಪು ಮಾಡಿಕೊಳ್ಳೋಣವೆಂದು ಕೃಷಿ ಹೊಂಡದಲ್ಲಿ ಆಟವಾಡಲು ಹೋದ ನಾಲ್ಕು ಮಕ್ಕಳು ನೀರು ಪಾಲಾದ ದಾರುಣ ಘಟನೆ ನಡೆದಿದೆ.
ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು ಗ್ರಾಮದಲ್ಲಿ ಈ ದುರ್ಘಟನೆ ಘಟನೆ ನಡೆದಿದೆ.ಹೆತ್ತವರ ದುಃಖ, ಸಂಕಟ ಹೇಳತೀರದಾಗಿದೆ.
ಕಿರಣ (6), ಬಸಮ್ಮ (11), ಶರತ್ (6),
ಹನುಮೇಶ್ (7) ಎಂಬವರು ಮೃತಪಟ್ಟ ಮಕ್ಕಳು.
ಮುಗಿಲ ಮುಟ್ಟಿದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು,
ಮಕ್ಕಳನ್ನು ಕಳೆದುಕೊಂಡು ಪೋಷಕರು ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.
ಎಳೆಯ ಕಂದಮ್ಮಗಳ ಸಾವಿನ ಸುದ್ದಿ ಕೇಳಿ ಇಡೀ ಊರಿನ ಜನ ದೌಡಾಯಿಸಿ ಹೆತ್ತವರನ್ನು ಸಮಾಧಾನ ಪಡಿಸಲಾಗದೆ ತಾವೂ ದುಃಖಿಸಿದರು.
ಕೆಂಭಾವಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
