ಕನ್ನಡತಿ,ಕೊಡವತಿ ಖ್ಯಾತ ನಟಿ ರಶ್ಮಿಕಾ ಮಂದಣ್ಣ ಸುಪ್ರಸಿದ್ದ ಟಾಲಿವುಡ್ ನಟ ವಿಜಯ್ ದೇವರಕೊಂಡ ವಿವಾಹ
ರಾಜಸ್ಥಾನದ ಉದಯಪುರದಲ್ಲಿ ಶಾಸ್ತ್ರೋಕ್ತ ಹಾಗೂ ವೈಭವದಿಂದ ನೆರವೇರಿತು.
ಗುರುವಾರ ಅದ್ದೂರಿಯಾಗಿ ವಿವಾಹ ಮಾಡಿಕೊಂಡ ತಾರಾ ಜೋಡಿ ಅಭಿಮಾನಿಗಳಿಗಾಗಿ ಫೋಟೋ ಶೇರ್ ಮಾಡಿದೆ.
ವಿವಾಹ ನೆರವೇರಿದ ಕೂಡಲೇ ಸುಂದರ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಫೋಟೋಗಳು ಕೋಟ್ಯಂತರ ಅಭಿಮಾನಿಗಳು ಕಣ್ ತುಂಬಿಕೊಂಡಿದ್ದಾರೆ,ಫೋಟೋ ಕ್ಷಣಾರ್ಧದಲ್ಲಿ ವೈರಲ್ ಆಗಿವೆ.ನೂತನ ವಧು ವರರಿಗೆ ಅಭಿಮಾನಿಗಳು, ಸೆಲೆಬ್ರಿಟಿಗಳು ಅಭಿನಂದನೆ ತಿಳಿಸಿ ಶುಭ ಹಾರೈಸಿದ್ದಾರೆ.
ತೆಲುಗು ಸಂಪ್ರದಾಯದಂತೆ ವಿಜಯ್-ರಶ್ಮಿಕಾ ಮದುವೆ ನೆರವೇರಿದೆ. ಈ ಮದುವೆಗೆ ಕುಟುಂಬದವರು ಮತ್ತು ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.ಹಾಗಾಗಿ 100 ಮಂದಿ ಮಾತ್ರ ಇದ್ದರಂತೆ.
ಹಲವು ವರ್ಷಗಳಿಂದ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಪ್ರೀತಿ ಮಾಡುತ್ತಿದ್ದರೂ ಬಹಿರಂಗಪಡಿಸಿರಲಿಲ್ಲ.
