ಮಸ್ತ್ ಮಲೈಕಾ….ಹಾಡು ಯಾರಿಗ್ಗೊತ್ತಿಲ್ಲ ಹೇಳಿ.ಎಲ್ಲರೂ ಈ ಹಾಡಿಗೆ ಫಿದಾ ಆಗಿದ್ದಾರೆ.
ಕಿಚ್ಚ ಸುದೀಪ್ ಅವರ ಮಗಳು ಸಾನ್ವಿ ಈಗ ಮನೆ ಮಾತಾಗಿಬಿಟ್ಟಿದಾರೆ.
ಮಸ್ತ್ ಮಲೈಕಾ ಗಾನ ಯುವಪಡೆ ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಹಾಡು 33 ಮಿಲಿಯನ್ ವೀಕ್ಷಣೆ ಕಂಡಿದೆಯಂತೆ.
ಸಾಮಾಜಿಕ ಜಾಲತಾಣದಲ್ಲೂ ಮಸ್ತ್ ಮಲೈಕಾ ಸದ್ದು ಮಾಡುತ್ತಲೇ ಇದೆ. ಬಾಲಿವುಡ್ನ ಖ್ಯಾತ ನಟ ಸಲ್ಮಾನ್ ಖಾನ್ ಕೂಡ ಮಸ್ತ್ ಮಲೈಕಾ ಹಾಡಿಗೆ ಫಿದಾ ಆಗಿ ಹಾಡನ್ನ ಹೊಗಳಿರೋದು ವಿಶೇಷ.
ಮಾರ್ಕ್ ಚಿತ್ರದ ಮಸ್ತ್ ಮಲೈಕಾ ಹಾಡಿಗೆ ಸಲ್ಮಾನ್ ಖಾನ್ ಮನ ಸೋತಿದ್ದು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಡಿನ ಲಿಂಕ್ ಶೇರ್ ಮಾಡಿರೋದೆ ಸಾಕ್ಷಿ.
ಸುಂದರವಾದ ಹಾಡು, ಒಳ್ಳೆಯದಾಗಲಿ ಎಂದು ಬರೆದು ಕಿಚ್ಚ ಸುದೀಪ್ ಮತ್ತು ಸಾನ್ವಿ ಸುದೀಪ್ ಅವರನ್ನು ಟ್ಯಾಗ್ ಮಾಡಿದ್ದಾರೆ ಸಲ್ಮಾನ್.
ಸಲ್ಮಾನ್ ಖಾನ್ ಅವರ ಹೊಗಳಿಕೆಯಿಂದ ಸಾನ್ವಿ ಫುಲ್ ಖುಷ್. ಸಲ್ಮಾನ್ ಖಾನ್ ಅವರ ಪೋಸ್ಟ್ನ್ನು ಹಂಚಿಕೊಂಡಿರುವ ಸಾನ್ವಿ, ಸಲ್ಮಾನ್ ಖಾನ್ ಅವರಿಗೆ ಧನ್ಯವಾದ ಹೇಳಿದ್ದಾರೆ.
ವಿವಿಧ ವೇದಿಕೆಗಳಲ್ಲೂ ಸಾನ್ವಿ ಹಾಡಿದ್ದಾರೆ. ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತ ಎರಡರ ಮೇಲೆ ಕೂಡ ಸಾನ್ವಿ ಹಿಡಿತ ಹೊಂದಿದ್ದಾರೆ.
ಮೆಲೋಡಿ ಹಾಡುಗಳನ್ನು ಕೂಡ ಸಾನ್ವಿ ಹಾಡುತ್ತಾರೆ. ಮ್ಯಾಂಗೋ ಪಚ್ಚ ಚಿತ್ರದ ಅರಗಿಣಿಯೇ… ಹಾಡು ಜನರ ಮೆಚ್ಚಗೆ ಪಡೆದಿರುವುದೇ ಉದಾಹರಣೆ.
