ಮೈಸೂರು: ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ರಾಘವೇಂದ್ರ ಬ್ರಿಗೇಡ್ ವತಿಯಿಂದ
ಬಿಲ್ವಪತ್ರೆ ಮತ್ತು ಶ್ರೀ ಶಿವ ಸಹಸ್ರನಾಮ ಪುಸ್ತಕವನ್ನು ವಿತರಿಸಲಾಯಿತು.
ಬೋಗಾದಿಯ ಕಾವೇರಿ ಬಡಾವಣೆ, ರವಿಶಂಕರ್ ಲೇಔಟ್, ನ್ಯಾಯಾಂಗ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಬಿಲ್ವಪತ್ರೆ ಮತ್ತು ಶ್ರೀ ಶಿವ ಸಹಸ್ರನಾಮ ಪುಸ್ತಕವನ್ನು ತಲುಪಿಸಿ ಶಿವನ ಕೃಪೆಗೆ ಪಾತ್ರರಾಗುವಂತೆ ಹಾರೈಸಲಾಯಿತು.
ಈ ಸಂದರ್ಭದಲ್ಲಿ ರಾಘವೇಂದ್ರ ಬ್ರಿಗೇಡ್ ಅಧ್ಯಕ್ಷರಾದ ರಾಘವೇಂದ್ರ, ಶ್ರೀಕಾಂತ್, ಮಂಜುನಾಥ್, ಅಭಿ ಕುಮಾರ್, ಮತ್ತಿತರರು ಪಾಲ್ಗೊಂಡಿದ್ದರು.
