ಬೆಂಗಳೂರು: ಕನ್ನಡದ ಖ್ಯಾತ ನಿರ್ದೇಶಕ
ಜೋಸೈಮನ್ ವಿಧಿವಶರಾಗಿದ್ದಾರೆ.
ಬೆಂಗಳೂರಿನ ಫಿಲ್ಮ್ ಚೇಂಬರ್ ನಲ್ಲಿ ಕೆರೆಯಲಾಗಿದ್ದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥಗೊಂಡರು.
ತಕ್ಷಣ ಜೋಸೈಮನ್ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ಕರೆತರಲಾಯಿತು. ವೈದ್ಯರು ಚಿಕಿತ್ಸೆ ಪ್ರಾರಂಭಿಸಿದ್ದರು.ಆದರೆ ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಜೋಸೈಮನ್ ನಿರ್ದೇಶನದ ಡಾ.ವಿಷ್ಣುವರ್ಧನ್ ಅಭಿನಯದ ಸಾಹಸಸಿಂಹ ಸೂಪರ್ ಹಿಟ್ ಆಗಿತ್ತು.ಅದೇ ರೀತಿ ಅಂಬರೀಶ್ ಅಭಿನಯದ ಏಜೆಂಟ್ ಅಮರ್ ಕೂಡಾ ಹಿಟ್ ಮೂವಿ.
ಸುಮಾರು ಚಿತ್ರಗಳನ್ನು ನಿರ್ದೇಶಿಸಿರುವ ಅವರು ನಟನೆಯಲ್ಲೂ ಸೈ ಎನಿಸಿ ಕೊಂಡಿದ್ದರು.ಚಿತ್ರಸಾಹಿತಿಯಾಗಿಯೂ ಹೆಸರು ಮಾಡಿದ್ದರು.
ಜೋಸೈಮನ್ ಅವರಿಗೆ 80 ವರ್ಷಗಳಾಗಿತ್ತು.ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು,ನಾಯಕನಟ,ನಟಿಯರು, ಕಲಾವಿದರು ಫಿಲ್ಮ್ ಚೇಂಬರ್ ನವರು ಕಂಬನಿ ಮಿಡಿದಿದ್ದಾರೆ.
