ಮೈಸೂರು: ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಮೂಹ ದೇವಸ್ಥಾನಗಳಲ್ಲಿ ಒಂದಾದ ಶ್ರೀ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮೂಲ ದೇವರಿಗೆ ಚಿನ್ನದ ಕೊಳಗ [ಮುಖವಾಡ]ವನ್ನು ಧರಿಸಲಾಗುವುದು.
ಭಕ್ತಾಧಿಗಳ ಅನಕೂಲಕ್ಕಾಗಿ ಸದರಿ ಫೆ.15 ರಂದು ದೇವರ ದರ್ಶನಕ್ಕೆ ಅವಕಾಶವಿರುತ್ತದೆ.
ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ, ಪ್ರಸಾದ ವಿತರಣೆಗೆ ಏರ್ಪಾಡು ಮಾಡಲಾಗಿದ್ದು, ಬೆಳಿಗ್ಗೆ 6.30 ರಿಂದ ಸಂಜೆ 4.30 ರವರೆಗೆ ಸಾರ್ವಜನಿಕರಿಗೆ ಸಾಮಾನ್ಯ ದರ್ಶನದ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ.
ರಾತ್ರಿ 10 ಗಂಟೆಗೆ ಸರ್ಕಾರಿ ಸೇವೆಯ ಮೂಲಕ ಏಕಾದಶಿ ರುದ್ರಾಭಿಷೇಕ ಇರುವುದರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ನಿರಂತರ ದರ್ಶನದ ವ್ಯವಸ್ಥೆಯ ಅವಕಾಶವನ್ನು ಕಲ್ಪಿಸಲಾಗಿದೆ ಎಂದು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
