ಮೈಸೂರು: ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಫೆಬ್ರವರಿ 14ರಂದು ಬೆಳಗ್ಗೆ 9ಘಂಟೆಯಿಂದ ಅವಧೂತ ದತ್ತಪೀಠ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆಯಲಿರಯವ
ಶ್ರೀ ಹನುಮಾನ್ ಚಾಲೀಸ ಪಾರಾಯಣ ಸಂಚಲನ ಸೃಷ್ಟಿಸಲಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಬಣ್ಣಿಸಿದರು.
ಗಣಪತಿ ಸಚ್ಚಿದಾನಂದ ಆಶ್ರಮದಿಂದ ಹೊರಟ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಪ್ರಚಾರ ಕಾರ್ಯಕ್ರಮದಲ್ಲಿ ಶಾಸಕರು ಮಾತನಾಡಿದರು.
ಈ ಮಹಾಯಜ್ಞದಲ್ಲಿ ಮೈಸೂರಿಗರು ಲಕ್ಷಾಂತರ ಸಂಖ್ಯೆಯಲ್ಲಿ ಪಾಲ್ಗೊಂಡು ಹನುಮನ ಸ್ಮರಣೆ ಮಾಡಿ ಹಿಂದೂ ಸಮಾಜದ ರಕ್ಷಣೆಗೆ ಕೈಜೋಡಿಸಬೇಕೆಂದು ಕರೆ ನೀಡಿದರು.
ಮೈಸೂರಿನ ಸರ್ವಜನಾಂಗದವರು ವಿವಿಧ ಬಡಾವಣೆಗಳು ಸೇರಿದಂತೆ ಗ್ರಾಮಂತರ ಪ್ರದೇಶ ಹಳ್ಳಿಹಳ್ಳಿಯಿಂದ ಹನುಮಾನ್ ಚಾಲೀಸ ಪಾರಾಯಣದಲ್ಲಿ ಭಾಗವಹಿಸಲು ಉತ್ಸುಕರಾಗುತ್ತಿದ್ದಾರೆ ಖುಷಿಯಿಂದ ಸಂಘಟಿತರಾಗುತ್ತಿದ್ದಾರೆ ಎಂದರೆ ಹಿಂದೂ ಸಮಾಜದ ರಕ್ಷಣೆಗೆ ಗಣಪತಿಸಚ್ಚಿದಾನಂದ ಸ್ವಾಮೀಜಿ ಯವರ ಹನುಮಾನ ಚಾಲೀಸ ಕಾರ್ಯಕ್ರಮ ಪ್ರೇರಣೆಯಾಗಿದೆ ಆಧ್ಯಾತ್ಮಿಕ ಲೋಕವೆ ಸೃಷ್ಟಿಯಾಗಲಿದೆ ಎಂದು ಹೇಳಿದರು.
ಆಂಜನೇಯನ ಭಕ್ತರು ಲಕ್ಷಕಂಠದಿಂದ ಜೈ ಹನುಮಾನ್ ಎಂದು ಘೋಷಣೆ ಹಾಕಿದಾಗ ಅದರಲ್ಲಿ ಸಿಗುವ ಆನಂದ ಪುಣ್ಯ ಅದ್ಬುತವಾದುದು ಮೈಸೂರಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಶ್ರೀವತ್ಸ ಕರೆ ನೀಡಿದರು.
ಕಾರ್ಯಕ್ರಮ ದಲ್ಲಿ ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ ಪಾರ್ಥಸಾರಥಿ, ಸುಬ್ಬಯ್ಯ, ಬಿಜೆಪಿ ಮುಖಂಡ ಜೋಗಿ ಮಂಜು, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಗೌಡ, ನಿರೂಪಕ ಅಜಯ್ ಶಾಸ್ತ್ರಿ, ಪ್ರದೀಪ್ ಕುಮಾರ್, ಪ್ರಜೇಶ್ ಕುಮಾರ್, ಗೋಲ್ಡ್ ಸುರೇಶ್, ಆಶ್ರಮದ ರಮೇಶ್ ಮತ್ತಿತರರು ಹಾಜರಿದ್ದರು.
