ಚಲನ ಚಿತ್ರ ನಿರ್ಮಾಣ ಮಾಡೋದಂದರೆ ಸುಲಭದ ಮಾತೇನಲ್ಲಾ ಬಹಳ ಕಷ್ಟ.ನಿರ್ಮಾಣ ಮಾಡೋರಿಗಷ್ಟೇ ಗೊತ್ತು ಅದರ ಕತೆ,ವ್ಯತೆ.
ಚಿತ್ರೋದ್ಯಮದಲ್ಲಿ ಸಣ್ಣ ಬಜೆಟ್ ನವರು ಉಳಿಯುವುದು, ಬೆಳೆಯುವುದು ಎರಡೂ ಕಷ್ಟಾನೆ.
ಇತ್ತೀಚಿನ ಸಿನಿಮಾಗಳ ನಿರ್ಮಾಣದ ಪರಿ ನೋಡಿದರೆ ಸಣ್ಣ,ಪುಟ್ಟ ಬಜೆಟ್ ಹಾಕಿ ಚಿತ್ರ ನಿರ್ಮಿಸ್ತೀವೆ ಅಂದುಕೊಳ್ಳುವ ಉದ್ಯಮಿಗಳ ಎದೆ ಡವ,ಡವಾ ಅಂತ ಹೊಡೆದುಕೊಳ್ಳುತ್ತೆ.
ಈಗ ಸರಾಸರಿ ಬಜೆಟ್ ಸರಿಸುಮಾರು 500 ಕೋಟಿ ದಾಟಿರುವ ಸಂದರ್ಭದಲ್ಲಿ ಎಲ್ಲ ನಿರ್ಮಾಪಕರು ಸಿನಿಮಾಗಳನ್ನು ಮಾಡಿ ಗೆಲ್ಲಲು ಸಾಧ್ಯ ಆಗ್ತಾ ಇಲ್ಲ.
ಜತೆಗೆ ಮೊದಲೆಲ್ಲಾ ಸಿನಿಮಾ ನಿರ್ಮಾಣ ಮಾಡಲು ಆಸಕ್ತಿಯುಳ್ಳವರು ವ್ಯವಹಾರದ ಜೊತೆಗೆ ಕಲಾಸಕ್ತಿ ಕೂಡಾ ಹೊಂದಿರುತ್ತಿದ್ದರು. ಆದರೆ ಈಗ ಕಾರ್ಪೊರೇಟ್ ವ್ಯವಹಾರವಾಗಿದೆ, ಕೆಲವು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ವ್ಯವಸ್ಥಿತ ಸಿನಿಮಾ ನಿರ್ಮಾಣವನ್ನೇ ಉದ್ಯಮವನ್ನಾಗಿ ಮಾಡಿಕೊಂಡಿವೆ.
ಈಗಾಗಲೇ ಹಲವು ಸಂಸ್ಥೆಗಳು ನಮ್ಮ ದೇಶದಲ್ಲಿ ಸಾವಿರಾರು ಕೋಟಿ ವೆಚ್ಚ ಮಾಡುತ್ತಿವೆ,ಇದೀಗ ನಮ್ಮ ದೇಶದ ಅತ್ಯಂತ ದೊಡ್ಡ ಸಮೂಹ ಸಂಸ್ಥೆ ಮತ್ತು ಆಗರ್ಭ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಬಿರ್ಲಾ ಕುಟುಂಬ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿರುವುದು ವಿಶೇಷ.
ಅಂಬಾನಿ, ಟಾಟಾ, ಜಿಂದಾಲ್, ಅದಾನಿ ಗ್ರೂಪ್ಗಳ ಹಾಗೇನೇ ಬಿರ್ಲಾ ಗ್ರೂಪ್ ಭಾರತದ ಅತ್ಯಂತ ಶ್ರೀಮಂತ ಮತ್ತು ಜನಪ್ರಿಯ ಸಮೂಹ ಸಂಸ್ಥೆ.
ಫ್ಯಾಷನ್, ಕನ್ಸ್ಟ್ರಕ್ಷನ್, ಐಟಿ, ಫಾರ್ಮಸಿ ಹೀಗೆ ಇನ್ನೂ ಹಲವಾರು ಕ್ಷೇತ್ರಗಳಲ್ಲಿ ಉದ್ಯಮಗಳನ್ನು ಹೊಂದಿರುವ ಆದಿತ್ಯ ಬಿರ್ಲಾ ಸಂಸ್ಥೆ ಇದೀಗ ಚಲನಚಿತ್ರ ಕ್ಷೇತ್ರಕ್ಕೂ ಕಾಲಿಟ್ಟಿದೆ.
ಆದಿತ್ಯ ಬಿರ್ಲಾ ಗ್ರೂಪ್ನ ಚೇರ್ಮನ್ ಕುಮಾರ ಮಂಗಲಮ್ ಬಿರ್ಲಾ ಅವರ ಪುತ್ರಿ, ಉದ್ಯಮಿ ಅನನ್ಯಾ ಬಿರ್ಲಾ ಅವರು ಬಿರ್ಲಾ ಸ್ಟುಡಿಯೋಸ್ ಪ್ರಾರಂಭ ಮಾಡಿದ್ದಾರೆ.
ಈ ಮೂಲಕ ಅನನ್ಯ ಸಿನಿಮಾ ನಿರ್ಮಾಣ, ವಿತರಣೆಗೆ ಇಳಿದಿದ್ದಾರೆ. ಅನನ್ಯಾ ಬಿರ್ಲಾ ಅವರಿಗೆ ಈ ಹಿಂದೆ ಬಿರ್ಲಾದ ಫ್ಯಾಷನ್ ಸೇರಿದಂತೆ ಇನ್ನೂ ಕೆಲ ಉದ್ಯಮಗಳನ್ನು ನಿರ್ವಹಿಸಿದ ಅನುಭವ ಇದೆ.ಈಗ ಬಿರ್ಲಾ ಸ್ಟುಡಿಯೋಸ್ನ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ.
ಅತ್ಯುತ್ತಮ ಪ್ರತಿಭೆ, ಉದಯೋನ್ಮುಖ ಪ್ರತಿಭಾವಂತರು ಮತ್ತು ದಿಟ್ಟ ವಿಚಾರಗಳಿಗೆ ಬೆಂಬಲ ನೀಡುವುದಾಗಿ ಬಿರ್ಲಾ ಸ್ಟುಡಿಯೋಸ್ ತಿಳಿಸಿದೆ.
