ಮೈಸೂರು: ಮೈಸೂರಿನ ಸರಸ್ವತಿಪುರಂನಲ್ಲಿರುವ ಮಹಾಬೋಧಿ ಕಾರ್ಲ ವಿದ್ಯಾರ್ಥಿ ನಿಲಯದಲ್ಲಿ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದ ಸೇವಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಎಳ್ಳು ಬೆಲ್ಲ, ಹಣ್ಣು ಹಂಪಲು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಜೆಡಿಎಸ್ ಕಾರ್ಯಾಧ್ಯಕ್ಷ ಪ್ರಕಾಶ್ ಪ್ರಿಯದರ್ಶನ್ ಎಲ್ಲರೂ ಬುದ್ಧನ ತತ್ವ ಸಿದ್ಧಾಂತವನ್ನು ಅಳವಡಿಸಿಕೊಂಡು ಜೀವನ ಸಾಗಿಸಿದರೆ ಬದುಕು ಬಹಳ ಸುಂದರವಾಗಿರುತ್ತದೆ ಎಂದು ತಿಳಿಸಿದರು.
ಮನುಷ್ಯ ಎಷ್ಟೇ ಹಣವಂತನಾದರೂ ಮತ್ತೊಬ್ಬರಿಗೆ ಸಹಾಯ ಮಾಡುವ ಗುಣವಿಲ್ಲದೆ ಇದ್ದರೆ ಪ್ರಯೋಜನವಿಲ್ಲ ದಾನಮಾಡುವ ಮನಸ್ಸು ಮುಖ್ಯ ಎಂದು ಹೇಳಿದರು.
ಇತರರಿಗೆ ಒಳಿತು ಮಾಡುವ ಯಾವ ಅವಕಾಶವನ್ನು ಕಳೆದುಕೊಳ್ಳಬೇಡಿ ನಾಳಿನ ಬಗ್ಗೆ ಬಲ್ಲವರಾರೂ ಇಲ್ಲ, ನಾವು ಎಷ್ಟು ಸಂತೋಷದಿಂದ ತಿಂದುಂಡು ಬದುಕಿದೆವು ಎನ್ನುವುದಕ್ಕಿಂತ ಪರರ ಕಷ್ಟ ಸುಖಗಳಿಗೆ ಹೇಗೆ ನೆರವಾದೆವು ಭರವಸೆಯ ಬೆಳಕಾದೆವು ಎನ್ನುವುದೇ ಜೀವನದ ಪರಿಪೂರ್ಣತೆ, ವಿದ್ಯಾರ್ಥಿಗಳು ಓದಿನ ಸಮಯದಲ್ಲಿ ಚೆನ್ನಾಗಿ ಓದಿ ವಿದ್ಯಾವಂತರಾಗಿ ಬುದ್ಧನ ಹಾದಿಯಲ್ಲಿ ಬದುಕಬೇಕೆಂದು ಪ್ರಕಾಶ್ ಪ್ರಿಯದರ್ಶನ್
ತಿಳಿಸಿದರು.
ಈ ಸಂದರ್ಭದಲ್ಲಿ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್,ಸಿಂಚನಗೌಡ, ವಿದ್ಯಾ, ಹಿರಿಯ ಕ್ರೀಡಾಪಟು ಮಹದೇವ್, ರಾಜು ಬಂಡೆಪ್ಪ,ಛಾಯಾ,ಗಾಯಕ ಯಶವಂತ್ ಕುಮಾರ್, ಸುಬ್ರಮಣಿ ,ರಾಜೇಶ್ ಕುಮಾರ್, ಮಹೇಶ್ ,ದತ್ತ ಮತ್ತಿತರರು ಹಾಜರಿದ್ದರು.
