ಬೆಂಗಳೂರು: ಈ ಬಾರಿ ಅಂದರೆ ಸೀಸನ್ 12 ರ ಬಿಗ್ ಬಾಸ್ ವಿನ್ನರ್ ಕಿರೀಟವನ್ನು ಅಪ್ಪಟ ಗ್ರಾಮೀಣ ಸೊಗಡು ಗಿಲ್ಲಿ ನಟ ಮುಡಿಗೇರಿಸಿಕೊಂಡಿದ್ದಾರೆ.
ಇಡೀ ರಾಜ್ಯದಲ್ಲಿ ಗಿಲ್ಲಿ ನಟನ ಹವಾ ಸೃಷ್ಟಿಯಾಗಿತ್ತು.ಗಿಲ್ಲಿಯ ಗೆಲುವಿಗಾಗಿ ರಾಜ್ಯದ ಮಂಡ್ಯ,ಮೈಸೂರು ಸೇರಿದಂತೆ ಅನೇಜ ಜಿಲ್ಲೆಗಳಲ್ಲಿ ಅದರಲ್ಲೂ ಗ್ರಾಮಾಂತರ ಪ್ರದೇಶಗಳಲ್ಲಿ ಪೂಜೆಗಳು ನಡೆದಿದ್ದವು.
ಕೋಟ್ಯಂತರ ಅಭಿಮಾನಿಗಳ ಹಾರೈಕೆ ಫಲ ನೀಡಿದೆ.ಕಡೆಗೂ ಗಿಲ್ಲಿ ಗೆದ್ದು ಬೀಗಿದ್ದಾರೆ.
ಬಿಗ್ಗ್ ಬಾಸ್ ವಿನ್ನರ್ ಘೋಷಣೆಗೆ ಅಭಿಮಾನುಗಳು ತುದಿಗಾಲಲ್ಲಿ ನಿಂತಿದ್ದು,ಬಿಗ್ ಬಾಸ್ ರೂವಾರಿ ಸುದೀಪ್ ಗಿಲ್ಲಿನಟನ ಹೆಸರು ಘೋಷಿಸುತ್ತಿದ್ದಂತೆ ಎಲ್ಲೆಡೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಿಗ್ ಬಾಸ್ 12 ರ ರನ್ನರ್ಅಪ್ ಆಗಿ ರಕ್ಷಿತಾ ಹೊರಹೊಮ್ಮಿದ್ದಾರೆ.
