ಮೈಸೂರು: ಉತ್ತರ ಕರ್ನಾಟಕದ ಸಂಗೀತಕ್ಕೆ ಶ್ರೀಮಂತ ಇತಿಹಾಸವಿದೆ. ಆದರೆ ಇತ್ತೀಚೆಗೆ ಅಶ್ಲೀಲ, ದ್ವಂದ್ವಾರ್ಥದ ಹಾಡುಗಳ ಮೂಲಕ ಈ ಪರಂಪರೆಗೆ ಮಸಿ ಬಳಿಯಲಾಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ವಿಕ್ರಂ ಅಯ್ಯಂಗಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಅಲ್ಲಿನ ಜನಪದ ಸಾಹಿತ್ಯ
ಹಾಡು ನಮ್ಮ ಸಂಸ್ಕೃತಿ ಪರಂಪರೆಯನ್ನು ಶತಮಾನಗಳಿಂದ
ಬಿತ್ತರಿಸುತ್ತ ಬಂದಿವೆ.
ಅಲ್ಲಿನ ಕೆಲವು ಕಲಾವಿದರು ಅಶ್ಲೀಲ ಗೀತೆ, ಸಂಗೀತ ಹಾಡುವುದನ್ನು ಬಿಡಬೇಕು. ರೀಲ್ಸ್ ಹುಚ್ಚಾಟ ಬಿಟ್ಟು, ಮೂಲ ಜಾನಪದ ಸಂಗೀತ, ಸಾಹಿತ್ಯವನ್ನು ಸಾಮಾಜಿಕ ತಾಣದಲ್ಲಿ ಪ್ರದರ್ಶಿಸುವ ಮೂಲಕ
ಶ್ರೀಮಂತ ಸಂಸ್ಕೃತಿಯನ್ನು ಉಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
ಮನೆ ಮಂದಿ ಕುಳಿತು ಕೇಳುವಂತಹ ಸಾಹಿತ್ಯವನ್ನು ರಚಿಸಿ ಹಾಡುವ ಕಾರ್ಯಕ್ರಮ ನೀಡಬೇಕು. ರಸಮಂಜರಿ ಮತ್ತಿತರ ಕಾರ್ಯಕ್ರಮಗಳಲ್ಲಿ ಅಶ್ಲೀಲ ಜಾನಪದ ಗೀತೆಗಳನ್ನು ಹಾಡದಂತೆ ಎಚ್ಚರಿಕೆ ನೀಡುವ ಮೂಲಕ ಸರ್ಕಾರ ಅಶ್ಲೀಲ ಗೀತೆಗಳಿಗೆ ಕಡಿವಾಣ ಹಾಕಬೇಕು ಎಂದು ವಿಕ್ರಮ್ ಅಯ್ಯಂಗಾರ್ ಆಗ್ರಹಿಸಿದ್ದಾರೆ.
