ಮೈಸೂರು,ಜನವರಿ.1: ಒಂದು ಹೆಜ್ಜೆ ರಕ್ತದಾನಿ ಬಳಗದ ಸದಸ್ಯ ಜಗದೀಶ್ ಅವರು ತುರ್ತು ಅವಶ್ಯಕತೆಯಿದ್ದ ವ್ಯಕ್ತಿಗೆ ರಕ್ತದಾನ ಮಾಡಿ ಜೀವ ಉಳಿಸಿ ಮಾದರಿಯಾಗಿದ್ದಾರೆ.
ಜಗದೀಶ್ ಅವರು ಇಂದು ಸೇರಿ 10ನೇ ಬಾರಿ ರಕ್ತದಾನ ಮಾಡಿರುವುದು ತುಂಬಾ ಸಂತೋಷದ ವಿಷಯ ಎಂದು ಒಂದು ಹೆಜ್ಜೆ ರಕ್ತದಾನಿಗಳ ಬಳಗ ಮೈಸೂರು ಅಧ್ಯಕ್ಷ ರಕ್ತದಾನಿ ಮಂಜು ತಿಳಿಸಿದ್ದಾರೆ.
ಜಗದೀಶ್ ಅವರಿಗೆ ಒಂದು ಹೆಜ್ಜೆ ರಕ್ತದಾನಿಗಳ ಬಳಗದ ವತಿಯಿಂದ ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸುತ್ತೇವೆ
ಎಂದು ಅವರು ಹೇಳಿದ್ದಾರೆ.
